ETV Bharat / state

ಸ್ಯಾಟಲೈಟ್ ಪೋನ್ ಸದ್ದು ವಿಚಾರ : ಸರ್ಕಾರ ಯಾವುದನ್ನು ಬಿಡುವುದಿಲ್ಲ.. ಗೃಹಸಚಿವ ಆರಗ ಜ್ಞಾನೇಂದ್ರ - Aaraga jnanendra spoke about Satellite phone noise issue

ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ ಸಕ್ರಿಯವಾದ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದರು..

ಗೃಹಸಚಿವ ಆರಗ ಜ್ಞಾನೇಂದ್ರ
ಗೃಹಸಚಿವ ಆರಗ ಜ್ಞಾನೇಂದ್ರ
author img

By

Published : Jun 27, 2022, 9:35 PM IST

ಮಂಗಳೂರು : ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ ಸಕ್ರಿಯವಾದ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಕೇಂದ್ರದ ಅಧಿಕಾರಿಗಳೊಂದಿಗೆ ರಾಜ್ಯ ಪೊಲೀಸರು ಸಂಪರ್ಕದಲ್ಲಿದ್ದಾರೆ. ಎಲ್ಲಿಂದ ಸ್ಯಾಟಲೈಟ್ ಫೋನ್ ಆ್ಯಕ್ಟೀವ್ ಆಗುತ್ತಿವೆ ಎಂಬ ಸ್ಥಳದ ಗುರುತನ್ನು ಕೇಂದ್ರದವರು ಕೊಡಬೇಕಾಗುತ್ತದೆ. ಈ ಹಿಂದೆ ಕೂಡ ಹಲವರನ್ನು ಈ ಸಂಬಂಧ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದರು.

ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿರುವುದು..

ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕರಾವಳಿಯ ಸಮುದ್ರದಲ್ಲಿ ಹೋಗುವ ಹಡಗಿನಲ್ಲಿ ಇದು ಆ್ಯಕ್ಟೀವ್ ಆಗುತ್ತದೆ. ಆದರೆ, ಕೆಲವು ಬಾರಿ ತಪ್ಪಾಗಿ ಅದು ಒಳಗಿನಿಂದ ಆ್ಯಕ್ಟೀವ್ ಆಗಿದೆ ಎಂಬುದನ್ನು ತೋರಿಸುತ್ತದೆ. ಸ್ಯಾಟಲೈಟ್ ಫೋನ್ ಆ್ಯಕ್ಟೀವ್ ಬಗ್ಗೆ ವಿಶೇಷವಾಗಿ ಗಮನಹರಿಸಲಾಗುವುದು. ನಾವು ಯಾವುದನ್ನು ಬಿಡುವುದಿಲ್ಲ. ಮೋದಿ ಸರ್ಕಾರ ಬಂದ ಮೇಲೆ ಜಮ್ಮು-ಕಾಶ್ಮೀರ ಹೊರತುಪಡಿಸಿ ಬೇರೆ ಕಡೆ ಬಾಂಬ್ ಸ್ಪೋಟದಂತಹ ಘಟನೆಗಳು ನಡೆಯುತ್ತಿಲ್ಲ. ಜನರ ಶಾಂತಿಯುತ ಬದುಕಿಗೋಸ್ಕರ ಕೇಂದ್ರ ಮತ್ತು ರಾಜ್ಯ ಕಣ್ಗಾವಲು ಇರಿಸಿದೆ ಎಂದರು.

ಸೂಕ್ತ ದಾಖಲೆ ಇಲ್ಲದಿದ್ದರೆ ವಿದೇಶಿಗರು ಅರೆಸ್ಟ್ ! : ರಾಜ್ಯದಲ್ಲಿ ವಿದೇಶಿಗರು ಅಕ್ರಮವಾಗಿ ವಾಸವಿರುವುದನ್ನು ಪತ್ತೆ ಹಚ್ಚಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿಯೂ ಅಕ್ರಮವಾಗಿ ವಾಸವಿರುವ ವಿದೇಶಿಗರನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆಗಳನ್ನು ಕಡ್ಡಾಯವಾಗಿ ಸರ್ವೆ ಮಾಡಿ ಗುರುತಿಸಲು ತಿಳಿಸಲಾಗಿದೆ. ಇನ್ನೆರಡು ವಾರದಲ್ಲಿ ಈ ಪ್ರಕ್ರಿಯೆ ಮುಗಿಸಲು ಸೂಚಿಸಲಾಗಿದೆ. ಪಾಸ್‌ಪೋರ್ಟ್, ವೀಸಾ ಇಲ್ಲದೆ ಇರುವುದು, ಅದರ ಅವಧಿ ಮುಗಿದಿರುವವರು, ಅಕ್ರಮವಾಗಿ ನುಸುಳಿರುವವರನ್ನು ಬಂಧಿಸಲಾಗುವುದು ಎಂದರು.

ಅನ್ವರ್ ಮಾಣಿಪ್ಪಾಡಿ ಕರೆಸಿ ಮಾತಾಡುವೆ : ರಾಜ್ಯದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯಗಳಾಗುತ್ತಿವೆ. ವಕ್ಪ್ ಆಸ್ತಿ ಕಬಳಿಕೆ ವರದಿ ಅನುಷ್ಠಾನ ಮಾಡದೆ ಇರುವ ಬಗ್ಗೆ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಅವರು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅನ್ವರ್ ಮಾಣಿಪ್ಪಾಡಿ ಅವರನ್ನು ಕರೆಸಿ ಮಾತನಾಡುತ್ತೇನೆ. ಅವರು ಯಾವ ಹಿನ್ನೆಲೆಯಲ್ಲಿ ಮಾತಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತೇನೆ. ಅವರ ಅತೃಪ್ತಿ ‌ಬಗ್ಗೆ ಗೊತ್ತಿಲ್ಲ. ಯಾವ ಧರ್ಮದವರನ್ನು ಸೈಡ್‌ಲೈನ್ ಮಾಡುವುದಿಲ್ಲ. ಯಾವುದೇ ಧರ್ಮದ ಬಗ್ಗೆ ಪೂರ್ವಾಗ್ರಹ ಇಲ್ಲ. ಆದರೆ, ಸಮಾಜದ್ರೋಹಿ, ಕಾನೂನುಬಾಹಿರ ವಿಚಾರಗಳಲ್ಲಿ ಬಿಡುವುದಿಲ್ಲ ಎಂದರು.

ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಕನ್ವಿಕ್ಷನ್ ಪರ್ಸಂಟೇಜ್ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಕೀಲರ ಜೊತೆಗೆ ಸಭೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಕನ್ವಿಕ್ಷನ್ ಪರ್ಸಂಟೇಜ್ ಹೆಚ್ಚಿಸುವ ಕುರಿತು ಚರ್ಚಿಸಲಾಗಿದೆ ಎಂದರು. ಇನ್ನೂ ಸೈಬರ್ ಕ್ರೈಮ್ ಅಪರಾಧ ಹೆಚ್ಚಿರುವ ಹಿನ್ನೆಲೆಯಲ್ಲಿ ಸೈಬರ್ ಸ್ಟೇಷನ್‌ಗಳನ್ನು ಅಲರ್ಟ್ ಮಾಡುವ ಬಗ್ಗೆ ಸೂಚಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುವವರ ಮೇಲೆ ನಿಗಾವಹಿಸಲಾಗುವುದು ಎಂದರು.

ಓದಿ : ಪವರ್ ಪಾಲಿಟಿಕ್ಸ್ ಮಾಡದೆ ಪೀಪಲ್ ಪಾಲಿಟಿಕ್ಸ್​​ನಿಂದ ಮೋದಿ ಚಿರಸ್ಮರಣೀಯರಾಗಿದ್ದಾರೆ: ಸಿಎಂ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.