ಉಳ್ಳಾಲ: ಬಡವರಿಗೆ, ನಿರಾಶ್ರಿತರಿಗೆ ಮನೆ ಹಸ್ತಾಂತರಿಸಿ, ರಕ್ತದಾನದ ಮೂಲಕ ಹಲವರ ಜೀವ ಉಳಿಸಿದ ಸಂಘಟನೆಯ ಕಾರ್ಯ ಶ್ಲಾಘನೀಯ. ಮುಂದೆಯೂ ಸೇವೆ ಮುಂದುವರಿಯಲಿ ಎಂದು ಗೌಸಿಯಾ ಜುಮಾ ಮಸೀದಿ ಖತೀಬರಾದ ಆಸೀಫ್ ಸಖಾಫಿ ಅಲ್ ಅಝ್ಹರಿ ಹಾರೈಸಿದರು.
ಬ್ಲಡ್ ಡೋನರ್ಸ್-ಮಂಗಳೂರು ವತಿಯಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೆಡ್ ಕ್ರಾಸ್ ಮುಖ್ಯಸ್ಥ ಪ್ರವೀಣ್ ಮಾತನಾಡಿ, ಜೀವ ಉಳಿಸುವ ಕಾರ್ಯದಿಂದ ಬದುಕಿಗೆ ದಾರಿ ಮಾಡಿ ಕೊಡುವಂತಹ ಯುವಕರ ಸೇವಾ ಮನೋಭಾವ ಹಾಗೂ ಶ್ರಮ ಸಮಾಜಕ್ಕೆ ಮಾದರಿ ಎಂದರು.
ಯುವ ವಕೀಲ ಅಝ್ಗರ್ ಮುಡಿಪು, ಸಂಘಟನೆ ಪ್ರಧಾನ ಕಾರ್ಯದರ್ಶಿ ನವಾಝ್ ಮೊಂಟೆಪದವು ಮಾತನಾಡಿದರು. ಬ್ಲಡ್ ಡೋನರ್ಸ್ ವಿಮೆನ್ಸ್ ವಿಂಗ್ ಅಧ್ಯಕ್ಷೆ ಆಯೇಷಾ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಮುಫೀದಾ ರೆಹಮಾನ್ ಅವರು ನಿರಾಶ್ರಿತರಿಗೆ ಮನೆ ಕೀಲಿಯನ್ನು ಹಸ್ತಾಂತರಿಸಿದರು.