ಬಂಟ್ವಾಳ: ತಾಲೂಕಿನ ಕಲ್ಲಡ್ಕ ಸಮೀಪ ಕುದ್ರೆಬೆಟ್ಟುವಿನಲ್ಲಿ ತಡರಾತ್ರಿ ನಡೆದ ಓಮ್ನಿ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾನೆ.
ಕಲ್ಲಡ್ಕ ನಿವಾಸಿ ಯತಿರಾಜ್ (30) ಮೃತ ವ್ಯಕ್ತಿ. ಕುದ್ರೆಬೆಟ್ಟು ಎಂಬಲ್ಲಿ ಓಮ್ನಿ ಮತ್ತು ಬೈಕ್ ಭಾನುವಾರ ತಡರಾತ್ರಿ ಡಿಕ್ಕಿಯಾಗಿತ್ತು. ಗಾಯಗೊಂಡಿದ್ದ ಯತಿರಾಜ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಯತಿರಾಜ್ ಮೃತಪಟ್ಟಿದ್ದಾರೆ. ಈ ಸಂಬಂಧ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.