ETV Bharat / state

ಮಂಗಳೂರಿನ ಹುಲಿ ಕುಣಿತಕ್ಕೆ ಹರ್ಭಜನ್​ ಸಿಂಗ್ ಫಿದಾ: ಫೇಸ್​ಬುಕ್​ನಲ್ಲಿ 'ಪಿಲಿನಲಿಕೆ' ವಿಡಿಯೋ ಶೇರ್ - Former cricketer Harbhajan Singh

ಮಂಗಳೂರಿನಲ್ಲಿ ನಡೆದ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಸಂತಸಪಟ್ಟಿದ್ದು ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹಾಕಿಕೊಂಡಿದ್ದಾರೆ.

ಹರ್ಭಜನ್​ ಸಿಂಗ್
ಹರ್ಭಜನ್​ ಸಿಂಗ್
author img

By ETV Bharat Karnataka Team

Published : Oct 27, 2023, 9:15 PM IST

ಮಂಗಳೂರು: ನಗರದಲ್ಲಿ ಆಯೋಜನೆಗೊಂಡ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ''ಮಂಗಳೂರು ಪ್ರವಾಸ ಅದ್ಭುತವಾಗಿತ್ತು. ಈ ಹಬ್ಬದ ಸಂಭ್ರಮದ ಭಾಗವಾಗಿರುವುದು ಶ್ರೇಷ್ಠವೆನಿಸಿತು" ಎಂದು ಬರೆದುಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಅಕ್ಟೋಬರ್ 23ರಂದು ಉರ್ವ ಮೈದಾನದಲ್ಲಿ ನಡೆದ ಪಿಲಿನಲಿಕೆ ಹುಲಿವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಹರ್ಭಜನ್ ಸಿಂಗ್ ಭಾಗವಹಿಸಿದ್ದರು‌.

  • " class="align-text-top noRightClick twitterSection" data="">

ಪಿಲಿನಲಿಕೆ ಕಾರ್ಯಕ್ರಮದಲ್ಲಿ ನಟ ಸುನಿಲ್​ ಶೆಟ್ಟಿ ಕೂಡ ಪಾಲ್ಗೊಂಡಿದ್ದರು. ಹರ್ಭಜನ್​ ಸಿಂಗ್​ ಆಗಮಿಸುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಜನರು ಕರತಾಡನದೊಂದಿಗೆ ಮೊಬೈಲ್​ ಲೈಟ್​ ಆನ್​ ಮಾಡಿ ಕ್ರಿಕೆಟಿಗನ ಮೇಲಿರುವ ಪ್ರೀತಿ ವ್ಯಕ್ತಪಡಿಸಿದ್ದರು. ಇದೇ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಹರ್ಭಜನ್​ ಸಿಂಗ್,​ ಇಲ್ಲಿನ ಆಹಾರವನ್ನು ಮೆಚ್ಚಿಕೊಂಡಿದ್ದಾರೆ.

ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿಂಗ್, "ನನಗೆ ಬಹಳಷ್ಟು ಪ್ರೀತಿ ಕೊಟ್ಟಿದ್ದೀರಿ. ಈ ಪ್ರೀತಿಗೆ ನಾನೇನು ಹೇಳಬೇಕೆಂದು ಗೊತ್ತಿಲ್ಲ" ಎಂದು ನೆರೆದಿರುವ ಪ್ರೇಕ್ಷಕರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ್ದರು. ವಿಭಿನ್ನ ಸಂಸ್ಕೃತಿಯನ್ನು ನೋಡಿ ಖುಷಿಯಾಗಿದೆ. ಹುಲಿವೇಷಧಾರಿಗಳ ಎನರ್ಜಿ ನೋಡಿ ಒಂದು ಸಲ ನಾನೇ ದಂಗಾದೆ. ಇಷ್ಟೊಂದು ಎನರ್ಜಿ ಇದ್ದಲ್ಲಿ ಭಾರತ ಇಪ್ಪತ್ತು ವರ್ಷಗಳ ಕಾಲ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದು ಖಂಡಿತ ಎಂದಿದ್ದರು.

ಇದನ್ನೂ ಓದಿ: ಹುಲಿವೇಷ ಕುಣಿತ ಸ್ಪರ್ಧೆಗೆ ತಾರಾ ಮೆರುಗು: ಕ್ರಿಕೆಟಿಗ ಹರ್ಭಜನ್​ ಸಿಂಗ್​, ನಟ ಸುನೀಲ್​ ಶೆಟ್ಟಿ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.