ETV Bharat / state

ಕಾಲೇಜಿನ ಹೆಸರಿನಲ್ಲಿ ಪಂಗನಾಮ: ಮಂಗಳೂರಿನ ವಿದ್ಯಾರ್ಥಿಗೆ 2.34 ಲಕ್ಷ ವಂಚಿಸಿದ ಚಾಲಾಕಿ! - Mangalore fraud case

ಕಾಲೇಜಿನ ಹೆಸರಿನಲ್ಲಿ ವಿದ್ಯಾರ್ಥಿಗೆ ಕರೆ ಮಾಡಿದ ಮಹಿಳೆ ಸುಮಾರು 2.34 ಲಕ್ಷ ರೂ. ವಂಚಿಸಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

fraud-case
ಕಾಲೇಜಿನ ಹೆಸರಿನಲ್ಲಿ ಪಂಗನಾಮ
author img

By

Published : Jul 14, 2021, 8:11 AM IST

ಮಂಗಳೂರು: ಮಂಗಳೂರಿನ ವಾಮಂಜೂರಿನಲ್ಲಿರುವ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗೆ ಕಾಲೇಜಿನ ಹೆಸರಿನಲ್ಲಿ ಫೋನ್ ಕರೆ ಮಾಡಿದ ಮಹಿಳೆವೋರ್ವಳು ಬರೋಬ್ಬರಿ 2.34 ಲಕ್ಷ ರೂಪಾಯಿ ವಂಚಿಸಿದ್ದಾಳೆ.

ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಮೂರನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗೆ ಜುಲೈ 7 ರಂದು 9959689529 ನಂಬರ್​ನಿಂದ ಕರೆ ಮಾಡಿದ ಮಹಿಳೆಯೊಬ್ಬಳು, ತಾನು ಕಾಲೇಜಿನ ಯೂನಿವರ್ಸಿಟಿಯಿಂದ ಮಾತನಾಡುತ್ತಿದ್ದು, 3ನೇ ವರ್ಷದ ಕಾಲೇಜು ಶುಲ್ಕ ಮತ್ತು ಡೆಪಾಸಿಟ್ ಕಟ್ಟಬೇಕು. ಇಲ್ಲದಿದ್ದಲ್ಲಿ ಹಾಲ್ ಟಿಕೆಟ್ ಕ್ಯಾನ್ಸಲ್ ಮಾಡಲಾಗುವುದು. ಶುಲ್ಕ ಕಟ್ಟಲು ಲಿಂಕನ್ನು ಕಳುಹಿಸಲಾಗಿದೆ ಎಂದು ಹೇಳಿ ಫೋನ್ ಕರೆ ಕಟ್ ಮಾಡಿದ್ದಳು.

ಬಳಿಕ ಎಸ್​ಎಂಎಸ್​ವೊಂದರಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ವಾಲೆಟ್ ಮೂಲಕ 200 ರಿಚಾರ್ಜ್ ಮಾಡಿದ್ದರು. ಜುಲೈ 8 ರಂದು ಮತ್ತೆ ಕರೆ ಮಾಡಿದ ಮಹಿಳೆ ವಿದ್ಯಾರ್ಥಿ ಖಾತೆಯಿಂದ ಹಂತಹಂತವಾಗಿ 2,34,326 ರೂ. ವರ್ಗಾಯಿಸಿಕೊಂಡಿದ್ದಾರೆ. ವಂಚನೆಯ ಅರಿವಾದ ಬಳಿಕ ವಿದ್ಯಾರ್ಥಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.