ETV Bharat / state

‘ಚಿ‌ಕಿಂಗ್’ ಸಂಸ್ಥೆಯ ಪಾರ್ಸೆಲ್ ಆಹಾರದಲ್ಲಿ ಜೀವಂತ ಹುಳು : ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಹಿಳೆ

‘ಚಿಕಿಂಗ್ ಇಟ್ಸ್ ಮೈ ಚಾಯಿಸ್’ ಸಂಸ್ಥೆಯ ಆಹಾರ ಖಾದ್ಯದಲ್ಲಿ ಜೀವಂತ ಹುಳು ಕಾಣಿಸಿಕೊಂಡಿದ್ದರಿಂದ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ..

author img

By

Published : Jan 31, 2021, 9:38 PM IST

dc
‘ಚಿ‌ಕಿಂಗ್’ ಸಂಸ್ಥೆಯ ಪಾರ್ಸೆಲ್ ಆಹಾರದಲ್ಲಿ ಜೀವಂತ ಹುಳು

ಮಂಗಳೂರು : ಮಹಿಳೆಯೊಬ್ಬರು ಪಾರ್ಸೆಲ್ ತರಿಸಿಕೊಂಡ ‘ಚಿಕಿಂಗ್ ಇಟ್ಸ್ ಮೈ ಚಾಯಿಸ್’ ಸಂಸ್ಥೆಯ ಆಹಾರ ಖಾದ್ಯದಲ್ಲಿ ಜೀವಂತ ಹುಳು ಕಾಣಿಸಿದೆ.

dsd
‘ಚಿ‌ಕಿಂಗ್’ ಸಂಸ್ಥೆಯ ಪಾರ್ಸೆಲ್ ಆಹಾರದಲ್ಲಿ ಜೀವಂತ ಹುಳು..

ನಗರದ ಪ್ರತಿಷ್ಠಿತ ಮಾಲ್‌ವೊಂದರಲ್ಲಿ ಇರುವ ‘ಚಿಕಿಂಗ್ ಇಟ್ಸ್ ಮೈ ಚಾಯಿಸ್’ ಸಂಸ್ಥೆಯಿಂದ ಲೇಡಿಹಿಲ್‌ ನಿವಾಸಿ ಸಲ್ಮಾ ಸಿಮ್ರಾನ್ ಕೆ. ಎಂಬುವರು ಚಿಕನ್ ಖಾದ್ಯ ಸಹಿತ ಬರ್ಗರ್ ಪಾರ್ಸೆಲ್‌ಗೆ ಆರ್ಡರ್ ಮಾಡಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪಾರ್ಸೆಲ್ ಮನೆ ಬಾಗಿಲಿಗೆ ಬಂದಿದೆ. ನಂತರ ಸಂತ್ರಸ್ತೆ ಸಹಿತ ಮಕ್ಕಳು ಹಾಗೂ ತಾಯಿ ಅಲ್ಪ ಪ್ರಮಾಣದಲ್ಲಿ ಆಹಾರ ಸೇವಿಸಿದ್ದಾರೆ.

ಈ ಸಮಯದಲ್ಲಿ ಚಿಕನ್ ಖಾದ್ಯದಲ್ಲಿ ದಿಢೀರ್ ಹುಳು ಕಾಣಿಸಿದೆ. ಈ ಬಗ್ಗೆ ಸಂಸ್ಥೆಯವರನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿದ್ರೂ ಯಾವುದೇ ಪ್ರತಿಕ್ರಿಯೆ ದೊರಕಿರಲಿಲ್ಲ. ಆಹಾರ ಪೂರೈಕೆ ಸಂಸ್ಥೆಯವರು ಸರಿಯಾಗಿ ನೋಡದೆ ಆಹಾರ ಪೊಟ್ಟಣ ಕಟ್ಟಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.