ಮಂಗಳೂರು: ಕೊರೊನಾ ಸೋಂಕು ಹರಡದಂತೆ ಲಾಕ್ ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಬದ್ರೀಯ್ಯಿನ್ ಜುಮ್ಮಾ ಮಸೀದಿ ಮಾರಿಪಳ್ಳ ಹಾಗೂ ಎಸ್ ಕೆಎಸ್ಎಸ್ಎಫ್ ಯುನಿಟ್ ವತಿಯಿಂದ ದಿನ ಬಳಕೆ ವಸ್ತುಗಳ ಕಿಟ್ಗಳನ್ನು ವಿತರಿಸಲಾಯಿತು.
ಈ ಕಿಟ್ನಲ್ಲಿ ಅಕ್ಕಿ, ಬೇಳೆ, ಚಾ ಹುಡಿ, ಸಕ್ಕರೆ, ಈರುಳ್ಳಿ, ಟೊಮ್ಯಾಟೊ ಮುಂತಾದ ದಿನ ಬಳಕೆ ಸಾಮಾಗ್ರಿಗಳನ್ನು ಸುಮಾರು 650 ಕುಟುಂಬಗಳಿಗೆ ವಿತರಣೆ ಮಾಡಲಾಯಿತು.

ಪುದು ಗ್ರಾಮದ ಮಾರಿಪಳ್ಳ, ಬದ್ರಿಯ್ಯೀನ್ ಜುಮ್ಮಾ ಮಸೀದಿ ವ್ಯಾಪ್ತಿಯಲ್ಲಿರುವ ಸುಜೀರ್, ಮಲ್ಲಿ ಗ್ರಾಮಗಳ ಸರ್ವಧರ್ಮಗಳ ಸುಮಾರು 650 ಕುಟುಂಬಗಳಿಗೆ ಈ ಆಹಾರ ಕಿಟ್ ವಿತರಣೆ ಕಾರ್ಯ ನಡೆದಿದೆ

ಬಿಜೆಎಂ ಉಪಾಧ್ಯಕ್ಷ ರಮ್ಲಾನ್ ಮಾರಿಪಳ್ಳ ಇವರ ನೇತೃತ್ವದಲ್ಲಿ ಈ ದಿನಬಳಕೆ ಸಾಮಾಗ್ರಿಗಳ ಕಿಟ್ ನೀಡಲಾಯಿತು.