ETV Bharat / state

ಮೀನುಗಾರರ ಮನೆಗಳ ರಕ್ಷಣೆಗೆ ಮೊದಲ ಆದ್ಯತೆ.. ಸಚಿವ ಕೋಟಾ ಶ್ರೀನಿವಾಸ ಪೂಜಾರಿ

author img

By

Published : Jun 21, 2020, 10:42 PM IST

ಉಳ್ಳಾಲದಿಂದ ಪ್ರಾರಂಭವಾಗಿ ಕಾರವಾರದವರೆಗಿನ 320ಕಿ.ಮೀ ಕಡಲ ತಡಿಯಲ್ಲಿ ಕಡಲಲೆಗಳ ಪ್ರಕ್ಷುಬ್ದತೆ ಜಾಸ್ತಿ ಇರುವುದರಿಂದ ಅತ್ಯಂತ ಹಾನಿಗೀಡಾದ ಪ್ರದೇಶಕ್ಕೆ ಕಲ್ಲು ತರಿಸಿ ತಡೆಗೋಡೆ ನಿರ್ಮಿಸಬೇಕೆಂದು ಯೋಚನೆ ಮಾಡಿದ್ದೇವೆ. ತುರ್ತಾಗಿ ಕಲ್ಲು ಜೋಡಿಸುವ ಕೆಲಸ ಇವತ್ತಿನಿಂದಲೇ ಪ್ರಾರಂಭವಾಗಲಿದೆ ಎಂದು ಸಚಿವರು ತಿಳಿಸಿದರು.

ullala kadalu
ಕೋಟಾ ಶ್ರೀನಿವಾಸ ಪೂಜಾರಿ

ಮಂಗಳೂರು : ಉಳ್ಳಾಲ ಭಾಗದ ಉಚ್ಚಿಲ ಸೋಮೇಶ್ವರದಲ್ಲಿ ಕಡಲ್ಕೊರೆತದ ತೀವ್ರತೆ ಹೆಚ್ಚಾಗಿದೆ. ಸಾರ್ವಜನಿಕರು ಮತ್ತು ಮೀನುಗಾರರ ದೂರಿನ ಹಿನ್ನೆಲೆಯಲ್ಲಿ ತುರ್ತಾಗಿ ತಡೆ ಕಲ್ಲುಗಳನ್ನು ಹಾಕಬೇಕೆಂಬ ಒತ್ತಾಯವಿದೆ. ಈ ನಿಟ್ಟಿನಲ್ಲಿ ಅಧಿಕಾರಿಯೊಂದಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದರು.

ಉಳ್ಳಾಲ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದ ಅಬ್ಬರ ಹೆಚ್ಚಾಗಿದ್ದು, ಸಾರ್ವಜನಿಕರ ಮತ್ತು ಮೀನುಗಾರರ ಮನೆಗಳನ್ನು ರಕ್ಷಣೆ ಮಾಡುವಂತಹ ಅನಿವಾರ್ಯತೆ ಇದೆ. ಜೊತೆಗೆ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ತುರ್ತಾಗಿ ಕಲ್ಲುಗಳನ್ನು ಜೋಡಿಸಲು ಬೇಕಾದಂತಹ ಅನುಮತಿಯನ್ನು ಸಿಎಂ ಈಗಾಗಲೇ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ನಮ್ಮ ಅಧಿಕಾರಿಗಳನ್ನು ಕರೆದು ಯಾವುದೇ ಮೀನುಗಾರರಿಗೆ ತೊಂದರೆಯಾಗದಂತೆ ಕಲ್ಲುಗಳನ್ನು ಜೋಡಿಸಬೇಕೆಂದು ಸೂಚನೆ ಕೊಡಲಾಗಿದೆ. ಉಳ್ಳಾಲದಿಂದ ಪ್ರಾರಂಭವಾಗಿ ಕಾರವಾರದವರೆಗಿನ 320 ಕಿ.ಮೀ ಕಡಲ ತಡಿಯಲ್ಲಿ ಕಡಲ ಅಲೆಗಳ ಪ್ರಕ್ಷುಬ್ಧತೆ ಜಾಸ್ತಿ ಇರುವುದರಿಂದ ಅತ್ಯಂತ ಹಾನಿಗೀಡಾದ ಪ್ರದೇಶಕ್ಕೆ ಕಲ್ಲು ತರಿಸಿ ತಡೆಗೋಡೆ ನಿರ್ಮಿಸಬೇಕೆಂದು ಯೋಚನೆ ಮಾಡಿದ್ದೇವೆ.

ತುರ್ತಾಗಿ ಕಲ್ಲು ಜೋಡಿಸುವ ಕೆಲಸ ಇವತ್ತಿನಿಂದಲೇ ಪ್ರಾರಂಭವಾಗಲಿದೆ ಎಂದು ಸಚಿವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.