ETV Bharat / state

ಮಂಗಳೂರು: ಮೀನುಗಾರಿಕೆ ಸ್ಥಗಿತಗೊಳಿಸಿದ ಶೇ 50ಕ್ಕೂ ಅಧಿಕ ಬೋಟ್​ಗಳು - fishering owners facing problem in mangaluru

ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿರುವ ಡೀಸೆಲ್​ ವೆಚ್ಚದಿಂದಾಗಿ ಮೀನುಗಾರರು ತೊಂದರೆಗೆ ಸಿಲುಕಿದ್ದಾರೆ.

ಮೀನುಗಾರಿಕೆ
ಮೀನುಗಾರಿಕೆ
author img

By

Published : Apr 26, 2022, 4:46 PM IST

ಮಂಗಳೂರು: ಏಪ್ರಿಲ್-ಮೇ ತಿಂಗಳು ವಿಫುಲವಾಗಿ ಮೀನುಗಾರಿಕೆ ನಡೆಸುವ ಸಮಯ. ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯಗಳು ಕಡಿಮೆ ಇದ್ದು ಉಳಿದೆಲ್ಲ ಸಮಯಗಳಿಗಿಂತ ಅತ್ಯಧಿಕ ಸಂಖ್ಯೆಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಆದರೆ, ಗಗನಕ್ಕೇರುತ್ತಿರುವ ಡೀಸೆಲ್​ ಬೆಲೆ ಸೀಸನ್ ಅವಧಿಯಲ್ಲಿ ಮೀನುಗಾರಿಕೆಗೆ ತಡೆಯೊಡ್ಡಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ತೈಲಬೆಲೆ ಹೆಚ್ಚಳವಾಗುತ್ತಿದೆ. ಗಗನಕ್ಕೇರುತ್ತಿರುವ ಡೀಸೆಲ್ ಬೆಲೆಯಿಂದ ಕರಾವಳಿಯ ಪ್ರಮುಖ ವಹಿವಾಟಾದ ಮತ್ಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ. ಮೀನುಗಾರಿಕೆಗೆ ತೆರಳುವ ಆಳ ಸಮುದ್ರ ಬೋಟ್, ಪರ್ಷಿಯನ್​ ಬೋಟ್​ಗಳಿಗೆ ಡೀಸೆಲ್ ಅತ್ಯಗತ್ಯ. ಆಳಸಮುದ್ರಕ್ಕೆ ತೆರಳುವ ಬೋಟ್​ಗಳು ಲಕ್ಷಾಂತರ ರೂ. ಗಳ ಡೀಸೆಲ್ ತುಂಬಿಸಿ‌‌ ಮೀನುಗಾರಿಕೆಗೆ ಹೋಗುತ್ತವೆ.

ಡೀಸೆಲ್ ವೆಚ್ಚವೂ ಸೇರಿದಂತೆ ಸುಮಾರು 5 ಲಕ್ಷ ರೂ. ವರೆಗೆ ಒಂದು ಟ್ರಿಪ್​ಗೆ ಖರ್ಚಾಗುತ್ತದೆ. ಆದರೆ, ಮೀನುಗಾರಿಕೆಗೆ ತೆರಳುತ್ತಿರುವ ಬೋಟ್​ಗಳಿಗೆ ಅಷ್ಟು ಪ್ರಮಾಣದ ಮೀನುಗಳು ಬಲೆಗೆ ಬೀಳುತ್ತಿಲ್ಲ. ಪರಿಣಾಮ ಮತ್ಸೋದ್ಯಮಿಗಳು ನಷ್ಟಕ್ಕೊಳಗಾಗುತ್ತಿದ್ದಾರೆ. ನಷ್ಟದ ಭೀತಿಯ ಹಿನ್ನೆಲೆಯಲ್ಲಿ ಬೋಟ್​ಗಳ ಮಾಲೀಕರು ಮೀನುಗಾರಿಕೆಗೆ ಬೋಟ್​ಗಳನ್ನು ಕಳುಹಿಸದೆ ಧಕ್ಕೆಯಲ್ಲಿಯೇ ಲಂಗರು ಹಾಕಿದ್ದಾರೆ.

ಮೀನುಗಾರಿಕೆಗೆ ತೆರಳಿದರೆ ಇಷ್ಟೇ ಪ್ರಮಾಣದ ಮೀನುಗಳು ಸಿಗುತ್ತದೆ ಎಂಬುದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಮೀನುಗಳ ಲಭ್ಯತೆ ಮತ್ತು ಯಾವ ಮೀನು ಎಂಬುದರ ಮೇಲೆ ಒಂದು ಬೋಟ್​ನಲ್ಲಿ ಎಷ್ಟು ಮೌಲ್ಯದ ಮೀನು ಸಿಗುತ್ತದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ಸುಮಾರು 4 ಲಕ್ಷ ರೂ. ವಿನಿಂದ 7-8 ಲಕ್ಷ ವರೆಗೆ ಮೀನುಗಳು ಸಿಗುತ್ತವೆಯಾದರೂ ಇದು ಬೋಟ್ ಮಾಲೀಕರಿಗೆ ನಿಶ್ಚಿತ ಎಂದು ಹೇಳಲು ಸಾಧ್ಯವಿಲ್ಲ. ಈ ರೀತಿಯ ಪರಿಸ್ಥಿತಿ ಇರುವುದರಿಂದ ಲಾಭ- ನಷ್ಟ ಎರಡೂ ಈ ಉದ್ಯಮದಲ್ಲಿದೆ. ಇನ್ನು ಡೀಸೆಲ್ ಬೆಲೆ ಹೆಚ್ಚಳವಾಗುತ್ತಿರುವುದು ನಷ್ಟವನ್ನು ಮತ್ತಷ್ಟು ಹೆಚ್ಚಿಸಿದರೆ, ಲಾಭಾಂಶವನ್ನು ಕಡಿಮೆ ಮಾಡಿದೆ.

ಮೀನುಗಾರಿಕಾ ಬೋಟ್​ಗೆ ಸರ್ಕಾರ ನೀಡುವ ಡೀಸೆಲ್ ಸಬ್ಸಿಡಿ ಸಕಾಲದಲ್ಲಿ ಕೈಸೇರುತ್ತಿಲ್ಲ. ಮೀನು ಮಾರಾಟದ ಹಣವು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಕಾರ್ಮಿಕರ ವೇತನ, ಮೆಂಟೆನೆನ್ಸ್ ಸೇರಿದಂತೆ ಮಾಡಲಾಗುವ ಖರ್ಚಿನಿಂದ ಲಾಭ ಸಿಗುತ್ತಿಲ್ಲ. ಲೋನ್​ಗಳನ್ನು ಕಟ್ಟಲಾಗದೆ ಮಾಲೀಕರು ಬೋಟ್​ಗಳನ್ನು ಮೀನುಗಾರಿಕೆಗೆ ಕಳುಹಿಸುತ್ತಿಲ್ಲ ಎನ್ನುತ್ತಾರೆ ಬೋಟ್ ಮಾಲೀಕರು.

ಇದನ್ನೂ ಓದಿ: ವಿಜಯನಗರದಲ್ಲಿ ಚಿರತೆ ದಾಳಿ, ಬಳ್ಳಾರಿಯಲ್ಲಿ ಸಿಡಿಲು ಬಡಿದು ಯುವಕ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.