ಮಂಗಳೂರು : ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮಸ್ಥರು ಇಂದು ಚುನಾವಣಾ ಬಹಿಷ್ಕಾರ ಸಭೆ ನಡೆಸಿದರು.
ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜ-ಬಲಯೂರು ರಸ್ತೆ ಕಾಮಗಾರಿಯಾಗಿಲ್ಲ ಎಂಬ ಕಾರಣಕ್ಕೆ ಚುನಾವಣಾ ಬಹಿಷ್ಕಾರ ಸಭೆ ನಡೆಸಲಾಯಿತು. ಗ್ರಾಮದ ನೂರಾರು ಜನರು ಮತದಾನ ಬಹಿಷ್ಕಾರ ಸಭೆಯಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಿದರು.