ETV Bharat / state

ಬಂಟ್ವಾಳದ ಧನೇಶ್ ಶೆಟ್ಟಿ ಈಗ ಇಂಡೋನೇಶ್ಯಾ ಕ್ರಿಕೆಟ್ ತಂಡದ ಆಲ್‌ರೌಂಡರ್ - ಧನೇಶ್ ಶೆಟ್ಟಿ

Dhanesh Shetty from Bantwal becomes all-rounder in Indonesian cricket team: ದಕ್ಷಿಣ ಕನ್ನಡ ಜಿಲ್ಲೆಯ ಧನೇಶ್ ಎಂಬವರು ಇಂಡೋನೇಶ್ಯಾ ಕ್ರಿಕೆಟ್​ ತಂಡದಲ್ಲಿ ಆಲ್‌ರೌಂಡರ್​ ಆಗಿ ಸೇರ್ಪಡೆಯಾಗಿ, ಟಿ20 ಪಂದ್ಯಾಟದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ.

Dhanesh Shetty
ಧನೇಶ್ ಶೆಟ್ಟಿ
author img

By ETV Bharat Karnataka Team

Published : Nov 26, 2023, 1:14 PM IST

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಧನೇಶ್​​ ಶೆಟ್ಟಿ ಈಗ ಇಂಡೋನೇಶ್ಯಾ ಕ್ರಿಕೆಟ್​ ತಂಡದಲ್ಲಿ ಆಲ್‌ರೌಂಡರ್​ ಆಗಿದ್ದು, ಮೊದಲ ಪಂದ್ಯವನ್ನೂ ಆ ದೇಶದ ಪರ ಆಡಿದ್ದಾರೆ. ಇಂಜಿನಿಯರ್ ಆಗಿರುವ ಧನೇಶ್, ಇಂಡೋನೇಶ್ಯಾದಲ್ಲಿ ಉದ್ಯೋಗಿ. ಮೊದಲೇ ಕ್ರಿಕೆಟ್​ನತ್ತ ಆಸಕ್ತರಾಗಿದ್ದ ಕಾರಣ ತಂಡದಲ್ಲಿ ಸೇರ್ಪಡೆ ಹೊಂದುವುದು ಇವರಿಗೆ ಸಹಕಾರಿಯಾಗಿದೆ. ಇಂಡೋನೇಶ್ಯಾ ದೇಶವು ಕ್ರಿಕೆಟ್​ಗೆ ವ್ಯಾಪಕ ಉತ್ತೇಜನ ನೀಡುತ್ತಿದ್ದು, ಭಾರತೀಯರೂ ಈ ತಂಡದಲ್ಲಿ ಸೇರ್ಪಡೆ ಹೊಂದಿದ್ದಾರೆ. ತಮಿಳುನಾಡು, ಮಹಾರಾಷ್ಟ್ರದ ಇಬ್ಬರು ಈ ತಂಡದಲ್ಲಿದ್ದಾರೆ.

ಬಂಟ್ವಾಳದ ಕುಕ್ಕಿಪ್ಪಾಡಿಯ ಪ್ರಗತಿಪರ ಕೃಷಿಕ ಮಹಾಬಲ ಶೆಟ್ಟಿ ಮತ್ತು ಪುಷ್ಪಾ ದಂಪತಿಯ ಮೂವರು ಪುತ್ರರಲ್ಲಿ ಒಬ್ಬರಾಗಿರುವ ಧನೇಶ್, ಬಾಲ್ಯದಲ್ಲೇ ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡವರು. ಸಿದ್ಧಕಟ್ಟೆಯ ಸಂತ ಬಾರ್ತಲೋಮಿಯಾ ಪ್ರಾಥಮಿಕ ಶಾಲೆ, ವಾಮದಪದವಿನ ಸರಕಾರಿ ಹೈಸ್ಕೂಲು, ಬಂಟ್ವಾಳ ಎಸ್.ವಿ.ಎಸ್. ಪದವಿಪೂರ್ವ ಕಾಲೇಜುವರೆಗೆ ಪ್ರಾಥಮಿಕ ಹಂತದಿಂದ ಪಿಯುಸಿವರೆಗಿನ ಓದುವ ಸಂದರ್ಭದಲ್ಲಿ ಇವರಿಗೆ ಕ್ರಿಕೆಟ್ ಆಟ ಪಂಚಪ್ರಾಣವಾಗಿತ್ತು. ಇದೇ ಆಸಕ್ತಿ ಇದೀಗ ಇಂಡೋನೇಷ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡದವರೆಗೂ ಕರೆದುಕೊಂಡು ಬಂದಿದೆ.

ಬೆಂಗಳೂರಿನಿಂದ ಇಂಡೋನೇಶ್ಯಾಕ್ಕೆ..: ಪಿಯುಸಿ ವ್ಯಾಸಂಗದ ಬಳಿಕ ಮೂಡುಬಿದಿರೆಯ ಎಸ್.ಎನ್.ಎಂ. ಪಾಲಿಟೆಕ್ನಿಕ್​ನಲ್ಲಿ ಡಿಪ್ಲೊಮಾ ಮಾಡಿ, ದೂರ ಶಿಕ್ಷಣದ ಮೂಲಕ ಎಂಜಿನಿಯರಿಂಗ್ ಪದವಿ ಪಡೆದ ಧನೇಶ್, ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಉದ್ಯೋಗಿಯಾಗಿದ್ದರು. ಆ ಸಂದರ್ಭ ಮಾರ್ತಹಳ್ಳಿಯಲ್ಲಿ ಎಸಿಸಿ ಕ್ರಿಕೆಟ್ ಕ್ಲಬ್​ನ ಖಾಕಾಯಂ ಸದಸ್ಯರಾಗಿದ್ದರು.

ಎಂಜಿನಿಯರಿಂಗ್ ಬಳಿಕ ಸಾಫ್ಟ್​ವೇರ್ ಕ್ಷೇತ್ರ ಪ್ರವೇಶಿಸಿದ ನಂತರ ಕಂಪನಿಯು ಇವರನ್ನು ಇಂಡೋನೇಶ್ಯಾಕ್ಕೆ ಕಳುಹಿಸಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದಾಗ ಜಕಾರ್ತಾದ ಸೌತ್ ಈಸ್ಟ್ ಏಷ್ಯಾದ ಮ್ಯಾವ್ ಕ್ರಿಸ್ ಕ್ಲಬ್ ಸೇರಿಕೊಂಡಿದ್ದರು. ಅಲ್ಲಿಂದ ಧನೇಶ್ ಶೆಟ್ಟಿ ಕ್ರಿಕೆಟ್ ಕನಸು ನನಸಾಗುವ ಹಂತ ತಲುಪಿದೆ. 2022ರಲ್ಲಿ ಐಸಿಎಲ್‌ಸಹಿತ ಸೆಲೆಕ್ಷನ್ ರೌಂಡ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಧನೇಶ್, ಈ ಮೂಲಕ ಇಂಡೋನೇಷ್ಯಾದ ರಾಷ್ಟ್ರೀಯ ಕ್ರಿಕೆಟ್ ತಂಡ ಸೇರಿದ್ದಾರೆ.

ಇವರಂತೆ ತಮಿಳುನಾಡಿನ ಶಂಕರ್, ಮಹಾರಾಷ್ಟ್ರದ ಪದ್ಮಾಕರ್ ತಂಡ ಸೇರ್ಪಡೆಗೊಂಡಿದ್ದಾರೆ. ನವೆಂಬರ್ 20ರಂದು ಕಾಂಬೋಡಿಯಾ ವಿರುದ್ಧ ಟಿ20 ಪಂದ್ಯಾಟದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: ಹೊಸ ಕೋಚ್​ ಆಯ್ಕೆಗೆ ಬಿಸಿಸಿಐ ಒಲವು: ವಿ.ವಿ.ಎಸ್.ಲಕ್ಷ್ಮಣ್​ಗೆ ಭಾರತ ಕ್ರಿಕೆಟ್​ ತಂಡದ ಚುಕ್ಕಾಣಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.