ETV Bharat / state

ಆನೆಗಳ ದಾಳಿಯಿಂದ ಅಡಿಕೆ ತೋಟ ನಾಶ... ಕಂಗಾಲಾದ ಬೆಳೆಗಾರ

ಸುಬ್ರಹ್ಮಣ್ಯದಲ್ಲಿ ಕಾಡಿನಿಂದ ಕೃಷಿ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು, ರವೀಂದ್ರ ರುದ್ರಪಾದ ಅವರಿಗೆ ಸೇರಿದ್ದ ತೋಟದಲ್ಲಿ ಸುಮಾರು 600 ಅಡಿಕೆ ಗಿಡಗಳು ನಾಶಮಾಡಿವೆ.

author img

By

Published : Jan 7, 2020, 5:57 AM IST

Subrahmanya
ಅಡಿಕೆ ತೋಟ ನಾಶ

ಸುಬ್ರಹ್ಮಣ್ಯ: ಕಾಡಿನಿಂದ ಕೃಷಿ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು, ಇಲ್ಲಿನ ಕೃಷಿಕರೋರ್ವರ ಅಡಿಕೆ ತೋಟವನ್ನು ಬಹುಪಾಲು ನಾಶ ಪಡಿಸಿವೆ.

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಳಿಯ ರುದ್ರ ಫಾರ್ಮ್ಸ್ ತೋಟದಲ್ಲಿ ಕೃಷಿಕ ರವೀಂದ್ರ ರುದ್ರಪಾದ ಅವರ ಸುಮಾರು 600 ಅಡಿಕೆ ಗಿಡಗಳು ಆನೆಯ ದಾಳಿಗೆ ನೆಲಸಮಗೊಂಡಿವೆ. ಇಡೀ ತೋಟ ಆನೆ ದಾಳಿಗೆ ನಲುಗಿ ಹೋಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಆನೆಯನ್ನು ನಿಯಂತ್ರಿಸುವ ಬಗ್ಗೆ ಯಾವುದೇ ಕಾರ್ಯಾಚರಣೆ ಕೈಗೊಂಡಿಲ್ಲ.

ಆನೆಗಳ ದಾಳಿಯಿಂದ ಅಡಿಕೆ ತೋಟ ನಾಶ

ಪಶ್ಚಿಮಘಟ್ಟದ ಪುಷ್ಪಗಿರಿ ಅರಣ್ಯಧಾಮದಿಂದ ಇಳಿದು ಬರುತ್ತಿರುವ ಆನೆಗಳ ಹಿಂಡು, ಇಂತಹ ಹಾವಳಿಯ ಮೂಲಕ ಅಪಾರವಾದ ಬೆಳೆ ನಷ್ಟ ಮಾಡುತ್ತಿವೆ. ಕಳೆದ ಮೂರು ದಿನಗಳಿಂದ ರವೀಂದ್ರ ರುದ್ರಪಾದರವರ ರುದ್ರ ಫಾರ್ಮ್ಸ್​ನಲ್ಲಿ ಈ ಆನೆ ಹಿಂಡು ದಾಳಿ ಇಡುತ್ತಿದ್ದರೂ ಅರಣ್ಯ ಇಲಾಖೆ ಆನೆಗಳನ್ನು ನಿಯಂತ್ರಿಸುವ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೃಷಿಕ ಆರೋಪಿಸಿದ್ದಾರೆ.

ಇಂತಹ ಆನೆಯ ದಾಳಿಗಳನ್ನು ತಪ್ಪಿಸುವುದು ಕೃಷಿಕರಿಗೆ ಹಾಗೂ ಅರಣ್ಯ ಇಲಾಖೆಗೆ ತಲೆನೋವು ತಂದಿದೆ.

Intro:ಸುಬ್ರಹ್ಮಣ್ಯ

ಕಾಡಿನಿಂದ ಕೃಷಿ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಇಲ್ಲಿನ ಕೃಷಿಕರೋರ್ವರ ಅಡಿಕೆ ಕೃಷಿ ತೋಟದ ಬಹುಪಾಲನ್ನು ನಾಶ ಪಡಿಸಿದೆ. ಒಂದೇ ಕೃಷಿ ಕುಟುಂಬದ ಅಂದಾಜು 600 ಅಡಿಕೆ ಹಾಗೂ ಬಾಳೆ ಗಿಡಗಳನ್ನು ನಾಶ ಮಾಡುವ ಮೂಲಕ ಆ ಕುಟುಂಬದ ಬದುಕಿಗೆ ಕೊಳ್ಳಿ ಇಟ್ಟಿದೆ. ಇಷ್ಟು ದೊಡ್ಡ ಅನಾಹುತ ಸಂಭವಿಸಿದರೂ ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಎನ್ನುತ್ತಾರೆ ಸ್ಥಳೀಯರು.Body:ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಳಿಯ ರುದ್ರ ಫಾರ್ಮ್ಸ್ ತೋಟದಲ್ಲಿ ಆನೆಯ ರುದ್ರ ತಾಂಡವ ನಡೆದಿರುವುದು. ಕೃಷಿಕ ರವಿಂದ್ರ ರುದ್ರಪಾದ ರವರ ಸುಮಾರು 600 ಅಡಿಕೆ ಗಿಡಗಳು ಆನೆಯ ದಾಳಿಗೆ ನೆಲಸಮಗೊಂಡಿದೆ .ಛಿದ್ರ ಛಿದ್ರವಾಗಿರುವ ಅಡಿಕೆ ಗಿಡಗಳು ಹಾಗೂ ಬಾಳೆ ಗಿಡಗಳು ತೋಟದ ತುಂಬಾ ಕಾಣ ಸಿಗುತ್ತಿದೆ. ಇಡೀ ತೋಟ ಆನೆ ದಾಳಿಗೆ ನಲುಗಿ ಹೋಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಆನೆಯನ್ನು ನಿಯಂತ್ರಿಸುವ ಬಗ್ಗೆ ಯಾವುದೇ ಕಾರ್ಯಾಚರಣೆ ಕೈಗೊಂಡಿಲ್ಲ.

ಪಶ್ಚಿಮಘಟ್ಟದ ಪುಷ್ಪಗಿರಿ ಅರಣ್ಯಧಾಮದಿಂದ ಇಳಿದು ಬರುತ್ತಿರುವ ಆನೆಗಳ ಹಿಂಡು ಈ ಹಾವಳಿಯ ಮೂಲಕ ಅಪಾರವಾದ ನಷ್ಟವನ್ನು ಉಂಟು ಮಾಡುತ್ತಿದೆ. ಹಗಲಿನಲ್ಲಿ ಕಾಡಲ್ಲಿ ಇರುವ ಆನೆಗಳು ಬೆಳಗ್ಗಿನ ಜಾವ ತೋಟಕ್ಕೆ ಲಗ್ಗೆ ಇಡುತ್ತಿದೆ. ಕಳೆದ ಮೂರು ದಿನಗಳಿಂದ ರವಿಂದ್ರ ರುದ್ರಪಾದ ರವರ ರುದ್ರ ಫಾರ್ಮ್ಸ್ ಗೆ ಈ ಆನೆ ಹಿಂಡು ದಾಳಿ ಇಡುತ್ತಿದ್ದರೂ ಅರಣ್ಯ ಇಲಾಖೆ ಆನೆಯನ್ನು ನಿಯಂತ್ರಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಇಂದು ರಾತ್ರಿ ಮತ್ತೆ ಕಾಡಿನಿಂದ ಬಂದು ದಾಳಿ ಮಾಡುವ ಸಾಧ್ಯತೆ ಇದೆಯಾದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಂತೆ ಕೂತಿದ್ದಾರೆ ಎಂಬುದು ಕೃಷಿಕರ ಆರೋಪವಾಗಿದೆ.

ಈ ಆನೆಯ ಹಿಂಡಿನಲ್ಲಿ ಮರಿಯಾನೆ ಇರುವುದು ಅವುಗಳು ತೋಟದಲ್ಲಿ ಹಾಕಿದ ಲದ್ದಿಯ ಗಾತ್ರದಿಂದ ತಿಳಿದು ಬಂದಿದೆ. ಈ ಮರಿಯಾನೆಯ ಕಾರಣದಿಂದಲೇ ಆನೆಗಳು ಚೆಲ್ಲಾಟವಾಡುತಿದ್ದು ಭಾರೀ ಅನಾಹುತಕ್ಕೆ ಕಾರಣವಾಗಿದೆ ಎನ್ನುವುದು ಸ್ಥಳೀಯರ ಮಾತು.

ಕಳೆದ ವರ್ಷ ಅರಣ್ಯ ಇಲಾಖೆ ಆನೆ ಸಾಗುವ ದಾರಿಯಲ್ಲಿ ಆನೆ ಕಂದಕ ನಿರ್ಮಿಸಿದ್ದು ,ಆದರೇ ಆನೆಗಳು ಈ ಕಂದಕವನ್ನು ಲೆಕ್ಕಿಸದೇ ಸಾಗಿ ಮುಂದೆ ಬಂದಿವೆ. ಕಂದಕ ಕಂಡಾಗ ಆನೆ ದಾಟಲು ಪ್ರಯತ್ನಿಸದೆ ಮರಳಿ ಹೋಗುವುದು ಹೆಚ್ಚು. ಇದರಿಂದ ಕಾಡಿನ ಭಾಗದಿಂದ ಆನೆ ಸರಾಗವಾಗಿ ಕೃಷಿ ತೋಟಕ್ಕೆ ಲಗ್ಗೆ ಹಾಕುವುದು ನಿಯಂತ್ರಣಕ್ಕೆ ಬರುತ್ತದೆ ಎಂಬ ನಂಬಿಕೆಯಿಂದ ಇದನ್ನು ನಿರ್ಮಿಸಲಾಗುತ್ತಿತ್ತು. ಆದರೇ ಕಳೆದ ಮೂರು ದಿನಗಳ ಆನೆ ದಾಳಿಯಿಂದ ಈ ಆನೆ ಕಂದಕಗಳೂ ನಿರುಪಯುಕ್ತ ಎನಿಸಿವೆ.

ಕಂದಕಕ್ಕೆ ಸುತ್ತ ಇರುವ ಮಣ್ಣನ್ನು ತಮ್ಮ ಸೊಂಡಿಲು ಹಾಗೂ ಕಾಲುಗಳ ಮೂಲಕ ಕಂದಕಕ್ಕೆ ದೂಡಿ ಹಾಕಿ ಆನೆಗಳು ಆದರ ಮೂಲಕ ದಾರಿ ಮಾಡಿಕೊಂಡು ಕಂದಕವನ್ನು ದಾಟುವ ಜಾಣತನವನ್ನು ರುದ್ರ ಫಾರ್ಮ್ಸ್ ನಲ್ಲಿ ಪ್ರಧರ್ಶಿಸಿದೆ.ಇದು ಕೃಷಿಕರಿಗೆ ಹಾಗೂ ಅರಣ್ಯ ಇಲಾಖೆಗೆ ತಲೆನೋವು ತಂದಿದೆ.Conclusion:ಕೃಷಿ ತೋಟದ ವೀಡಿಯೋ ಹಾಕಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.