ETV Bharat / state

ಯಾಂತ್ರೀಕೃತ ಕೃಷಿ ಪ್ರಾತ್ಯಕ್ಷಿಕೆಗೆ ವೀರೇಂದ್ರ ಹೆಗ್ಗಡೆ ಚಾಲನೆ

author img

By

Published : Jun 22, 2020, 9:12 PM IST

ಯಾಂತ್ರೀಕೃತ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಿದರು.

Demonstration of automated agriculture
ಯಾಂತ್ರೀಕೃತ ಕೃಷಿ ಪ್ರಾತ್ಯಕ್ಷಿತೆ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆ ಚಾಲನೆ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸಹ್ಯಾದ್ರಿ ವಸತಿ ಗೃಹದ ಬಳಿ ಹತ್ತು ಎಕರೆ ಪ್ರದೇಶದ ಗದ್ದೆಯಲ್ಲಿ ಯಾಂತ್ರೀಕೃತ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಸೋಮವಾರ ಚಾಲನೆ ನೀಡಿದರು.

ಈ ಕುರಿತು ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್.ಮಂಜುನಾಥ್ ಅವರು, ಕೂಲಿ ಕಾರ್ಮಿಕರ ಕೊರತೆ ಹಾಗೂ ಅಧಿಕ ವೆಚ್ಚದಿಂದಾಗಿ ರೈತರು ಇಂದು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಯಾಂತ್ರೀಕೃತ ಕೃಷಿಯಿಂದ ಅಧಿಕ ಇಳುವರಿ ಹಾಗೂ ಲಾಭ ಪಡೆಯಬಹುದು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಂದು ಪ್ರಯತ್ನವನ್ನು ಮಾಡುತ್ತಿದೆ ಅದಕ್ಕೆ 'ಯಂತ್ರಶ್ರೀ' ಎಂಬ ಹೆಸರನ್ನಿಟ್ಟಿದ್ದೇವೆ ಈ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಭತ್ತ ಬೇಸಾಯವನ್ನು ಯಾಂತ್ರೀಕರಣಗೊಳಿಸುವಂತದ್ದು ಮತ್ತು ಕೂಲಿಯಾಳುಗಳ ಸಮಸ್ಯೆಯನ್ನು ನಿವಾರಿಸುವಂತ ಪ್ರಯತ್ನವನ್ನು ಮಾಡುತಿದ್ದೇವೆ ಎಂದರು.

ಯಾಂತ್ರೀಕೃತ ಕೃಷಿ ಪ್ರಾತ್ಯಕ್ಷಿಕೆಗೆ ವೀರೇಂದ್ರ ಹೆಗ್ಗಡೆ ಚಾಲನೆ

ಈ ವರ್ಷ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಯಾಂತ್ರೀಕೃತ ಬೇಸಾಯ ಮಾಡಲು ಉದ್ದೇಶಿಲಾಗಿತ್ತು. ಆದರೆ, ಕೊರೊನಾದಿಂದಾಗಿ ಯಂತ್ರಗಳು ನಮಗೆ ಲಭ್ಯವಾಗದಿರುವುದು ಹಾಗೂ ನಮ್ಮ ಕಾರ್ಯಕರ್ತರು ರೈತರನ್ನು ಸರಿಯಾಗಿ ಸಂಪರ್ಕಿಸಲು ಸಾಧ್ಯವಾಗದೇ ಇರುವುದರಿಂದ 15 ಸಾವಿರ ಹೆಕ್ಟೇರ್ ರಾಜ್ಯದ ವಿವಿಧೆಡೆ ಯಾಂತ್ರೀಕೃತ ಭತ್ತ ಬೇಸಾಯ ಕೈಗೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.