ಸುಳ್ಯ (ಮಂಗಳೂರು): ಇಲ್ಲಿನ ಬೆಳ್ಳಾರೆ ಸಮೀಪದ ಕೊಡಿಯಾಲ-ಮೂವಪ್ಪೆಯಲ್ಲಿ 4ನೇ ವರ್ಷದ ದೀಪಾವಳಿ ಕ್ರೀಡಾಕೂಟ ಮತ್ತು ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಹಿಂದುಳಿದ ಗ್ರಾಮವಾದ ಮೂವಪ್ಪೆಯಲ್ಲಿ ಕಳೆದ 4 ವರ್ಷಗಳಿಂದ ದೀಪಾವಳಿ ಹಬ್ಬವನ್ನು ಊರವರೆಲ್ಲರೂ ಸೇರಿಕೊಂಡು ಆಚರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ವರ್ಷವೂ ಸ್ನೇಹಿತರ ಬಳಗ(ರಿ) ಕಲ್ಪಡ ಆಶ್ರಯದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಮಕ್ಕಳು ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇದೇ ವೇಳೆ ನಿವೃತ್ತ ಸೈನಿಕ ರವೀಂದ್ರಗೌಡ ರಾಮಕುಮೇರಿಯವರನ್ನು ಸನ್ಮಾನಿಸಲಾಯಿತು.
ಗ್ರಾಮೀಣ ಪ್ರದೇಶದ ಸೈನಿಕರಿಗೆ ಸನ್ಮಾನ ಮತ್ತು ಕ್ರೀಟಾಕೂಟದ ಮೂಲಕ ಗ್ರಾಮಸ್ಥರನ್ನು ಒಗ್ಗೂಡಿಸುವ ಪ್ರಯತ್ನವನ್ನು ಇಲ್ಲಿನ ಯುವಕರು ಪ್ರತಿವರ್ಷವೂ ಮಾಡುತ್ತಿದ್ದು, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.