ಬಂಟ್ವಾಳ(ದ.ಕ): ಅವಶ್ಯಕ ವಸ್ತುಗಳನ್ನು ಖರೀದಿಸಲು ಜಿಲ್ಲಾಡಳಿತ ನೀಡಿದ ನಿರ್ಬಂಧ ಸಡಿಲಿಕೆಯ ಹಿನ್ನೆಲೆ ಬೆಳಗ್ಗಿನಿಂದಲೇ ಬಿ.ಸಿ. ರೋಡ್, ಬಂಟ್ವಾಳ, ಮೇಲ್ಕಾರ್, ಕೈಕಂಬ ಸಹಿತ ಗ್ರಾಮೀಣ ಪ್ರದೇಶಗಳಲ್ಲೂ ಜನದಟ್ಟಣೆ ಹೆಚ್ಚಾಗಿತ್ತು.
ಬೆಳಗ್ಗೆಯೇ ಬಂಟ್ವಾಳ ಪೊಲೀಸರು, ತಾಲೂಕಾಡಳಿತ, ಪುರಸಭೆ ಸಿಬ್ಬಂದಿ ಧ್ವನಿವರ್ಧಕಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡುತ್ತಿದ್ದರು. ಕೆಲವೆಡೆ ಮಾರ್ಕ್ ಮಾಡಿದ ಜಾಗಗಳಲ್ಲಿ ನಿಂತು ಖರೀದಿ ಮಾಡಿದರೆ, ಇನ್ನು ಕೆಲವೆಡೆ ಅಂಗಡಿಯೊಳಗೆ ನೂಕುನುಗ್ಗಲು ಉಂಟಾಯಿತು.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್., ನಗರ ಠಾಣಾ ಎಸ್ಐ ಅವಿನಾಶ್, ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸಹಿತ ಅಧಿಕಾರಿಗಳು ಅಲ್ಲಲ್ಲಿ ತೆರಳಿ ಜನರನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಿದರು. ಆದರೆ ಕೆಲವೊಂದು ಮೆಡಿಕಲ್ ಶಾಪ್ಗಳಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಲು ಸುಮಾರು 2 ಗಂಟೆಗೂ ಹೆಚ್ಚು ಕಾಲ ಕ್ಯೂ ನಿಲ್ಲಬೇಕಾಯಿತು.