ಮಂಗಳೂರು: ಶಾಸಕ ಯು.ಟಿ. ಖಾದರ್ ಮತ್ತು ವಿಧಾನ ಪರಿಷತ್ ಮಾಜಿ ಶಾಸಕ ಐವನ್ ಡಿಸೋಜ ನೇತೃತ್ವದ ಜಿಲ್ಲಾ ಕೋವಿಡ್ -19 ಸಹಾಯವಾಣಿ ತಂಡ ವೆನ್ಲಾಕ್ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿತು.
![Covid-19 sahayavani group visit hospitals](https://etvbharatimages.akamaized.net/etvbharat/prod-images/08:45:14:1595603714_kn-mng-04-covid-helpline-hospital-visit-script-ka10015_24072020204417_2407f_1595603657_712.jpg)
ಕೋವಿಡ್ ಸೋಂಕಿತರಿಂದ ಆಸ್ಪತ್ರೆಯ ವ್ಯವಸ್ಥೆ ಗಳ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿ, ಅಧಿಕಾರಿಗಳು ಹಾಗೂ ಸೋಂಕಿತರನ್ನು ಭೇಟಿ ಮಾಡಿ ಕುಂದುಕೊರತೆಗಳನ್ನು ವಿಚಾರಿಸಿದರು. ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ, ಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳಿಗೆ ಆಗುವ ತೊಂದರೆಗಳ ಬಗ್ಗೆ ತಂಡ ಅಧಿಕಾರಿಗಳ ಗಮನ ಸೆಳೆದರು.
![Covid-19 sahayavani group visit hospitals](https://etvbharatimages.akamaized.net/etvbharat/prod-images/08:45:15:1595603715_kn-mng-04-covid-helpline-hospital-visit-script-ka10015_24072020204417_2407f_1595603657_158.jpg)