ETV Bharat / state

ಮಂಗಳೂರಿನಲ್ಲಿ ಕೋವ್ಯಾಕ್ಸಿನ್ ಲಸಿಕೆ ಸಂಪೂರ್ಣ ಖಾಲಿ: ಡಾ. ರಾಜೇಶ್ - ಮಂಗಳೂರಿಗೆ ಪೂರೈಕೆಯಾಗದ ಕೋವ್ಯಾಕ್ಸಿನ್​

ದ.ಕ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ಎರಡನೇ ಹಂತದ ಲಸಿಕೆ ನೀಡುವಿಕೆಗೆ 10 ಸಾವಿರ‌ ಡೋಸ್ ಬಂದಿದ್ದು, ಅದರಲ್ಲಿ‌ 8,500 ಡೋಸ್ ಈಗಾಗಲೇ ಮುಗಿದಿದೆ. ಇಂದಿಗೆ 1,500 ಲಸಿಕೆಗಳಿದ್ದು, ಸಂಜೆಯೊಳಗೆ ಸಂಪೂರ್ಣ ಮುಗಿಯಲಿದೆ ಎಂದು ಕೋವಿಡ್ ಲಸಿಕಾ ನೋಡಲ್ ಅಧಿಕಾರಿ ಡಾ. ರಾಜೇಶ್ ತಿಳಿಸಿದ್ದಾರೆ.

manglore
manglore
author img

By

Published : May 12, 2021, 3:56 PM IST

ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಸಂಪೂರ್ಣ ‌ಮುಗಿದಿದ್ದು, ಸಾಕಷ್ಟು ದಿನಗಳಿಂದ ಲಸಿಕೆ ಪೂರೈಕೆಯಾಗಿಲ್ಲ.

ಕೋವಿಶೀಲ್ಡ್ ಲಸಿಕೆ ಎರಡನೇ ಹಂತದ ಲಸಿಕೆ ನೀಡುವಿಕೆಗೆ 10 ಸಾವಿರ‌ ಡೋಸ್ ಬಂದಿದ್ದು, ಅದರಲ್ಲಿ‌ 8,500 ಡೋಸ್ ಈಗಾಗಲೇ ಮುಗಿದಿದೆ. ಇಂದಿಗೆ 1,500 ಲಸಿಕೆಗಳಿದ್ದು, ಸಂಜೆಯೊಳಗೆ ಸಂಪೂರ್ಣ ಮುಗಿಯಲಿದೆ. 18-44 ವಯಸ್ಸಿನವರಿಗೆ ನಿನ್ನೆಯಿಂದ‌‌‌ ಮೊದಲ ಹಂತದ ಲಸಿಕೆ ನೀಡಲು ಆರಂಭವಾಗಿದೆ.‌ 18-44 ವಯಸ್ಸಿನವರಿಗೆಂದು ಜಿಲ್ಲೆಗೆ 6,500 ಕೋವಿಶೀಲ್ಡ್ ಲಸಿಕೆ ಬಂದಿದ್ದು, ಇದನ್ನು 7 ದಿನಗಳಿಗೆ ನೀಡಲಾಗುತ್ತದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ದಿನಕ್ಕೆ 250 ಮಂದಿಗೆ ನೀಡಲಾಗುತ್ತದೆ. ಈಗಾಗಲೇ ಎಲ್ಲವೂ ನೋಂದಣಿಯಾಗಿದೆ.

ಅಲ್ಲದೆ ಎಲ್ಲಾ 4 ತಾಲೂಕು ಕೇಂದ್ರಗಳಲ್ಲಿ ದಿನಕ್ಕೆ 170ರಂತೆ 7 ದಿನಗಳಿಗೆ ಈಗಾಗಲೇ ಎಲ್ಲವೂ ನೋಂದಣಿಯಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಈಗಾಗಲೇ ನೋಂದಣಿ ಮಾಡಿದವರಿಗೆ ಇಂದು ಸೇರಿ ಮುಂದಿನ ಆರು ದಿನಗಳವರೆಗೆ ಲಸಿಕೆ ನೀಡಲಾಗುತ್ತದೆ. ಆ ಬಳಿಕ ಮತ್ತೆ ಲಸಿಕೆ ಆಗಮಿಸಲಿದ್ದು, ಬಳಿಕ ಮುಂದೆ ನೋಂದಣಿ ಮಾಡುವವರಿಗೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ದ.ಕ ಜಿಲ್ಲಾ ಕೋವಿಡ್ ಲಸಿಕಾ ನೋಡಲ್ ಅಧಿಕಾರಿ ಡಾ. ರಾಜೇಶ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.