ETV Bharat / state

ಬೆಳ್ಳಂಬೆಳಗ್ಗೆ ನಗರಸಭೆ ಕಮಿಷನರ್ ಭರ್ಜರಿ ಕಾರ್ಯಾಚರಣೆ: ಮಾಸ್ಕ್ ಧರಿಸದವರಿಂದ ದಂಡ ವಸೂಲಿ...

ಉಳ್ಳಾಲ, ತೊಕ್ಕೊಟ್ಟು, ತೊಕ್ಕೊಟ್ಟು ಒಳಪೇಟೆ, ಪಂಡಿತ್ ಹೌಸ್, ಜಂಕ್ಷನ್ ಸುತ್ತಾ ಸುತ್ತಾಡಿದ ಕಮಿಷನರ್ , ಮಾಸ್ಕ್ ಹಾಕದೆ ವ್ಯಾಪಾರ ನಡೆಸುತ್ತಿದ್ದವರಿಂದ ದಂಡ ವಸೂಲಿ ಮಾಡಿದ್ದಾರೆ.

Corona rules violation in ullala
ನಗರಸಭೆ ಕಮೀಷನರ್ ಭರ್ಜರಿ ಕಾರ್ಯಾಚರಣೆ
author img

By

Published : Oct 3, 2020, 12:54 PM IST

ಉಳ್ಳಾಲ: ಬೀದಿಬದಿ ವ್ಯಾಪಾರಿಗಳು ಮಾಸ್ಕ್ ಹಾಕದೆ ನಿಯಮ ಉಲ್ಲಂಘಿಸಿದ್ದರಿಂದ ನಗರಸಭೆ ಕಮಿಷನರ್ ರಾಯಪ್ಪ ಹಲವರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಿದ್ದಾರೆ.

ಮಾಸ್ಕ್ ಧರಿಸದವರಿಂದ ದಂಡ ವಸೂಲಿ.

ಉಳ್ಳಾಲ, ತೊಕ್ಕೊಟ್ಟು, ತೊಕ್ಕೊಟ್ಟು ಒಳಪೇಟೆ, ಪಂಡಿತ್ ಹೌಸ್, ಜಂಕ್ಷನ್ ಸುತ್ತಾ ಸುತ್ತಾಡಿದ ಕಮಿಷನರ್ , ಮಾಸ್ಕ್ ಹಾಕದೆ ವ್ಯಾಪಾರ ನಡೆಸುತ್ತಿದ್ದವರಿಂದ ದಂಡ ವಸೂಲಿ ಮಾಡಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ್ದಲ್ಲಿ ರೂ.1,000 ಹಾಗೂ ಎರಡನೇ ಬಾರಿಯೂ ಮಾಸ್ಕ್ ಹಾಕದೆ ಇದ್ದಲ್ಲಿ ರೂ. 2,000 ದಂಡ ವಿಧಿಸಲಾಗತ್ತದೆ. ಒಂದು ವೇಳೆ ಆದೇಶ ಪಾಲಿಸದೆ ಇದ್ದಲ್ಲಿ ಅಂಗಡಿಯನ್ನೇ ತೆರವುಗೊಳಿಸುವಂತೆ ಆದೇಶ ಇದೆ ಎಂದರು.

10 ಗಂಟೆಗೆ ನಗರಸಭೆ ಕರ್ತವ್ಯಕ್ಕೆ ಹಾಜರಾಗಬೇಕಿದ್ದರೂ, ಬೆಳಿಗ್ಗೆ 8 ಕ್ಕೆ ಕರ್ತವ್ಯಕ್ಕೆ ಹಾಜರಾಗಿ ಕೋವಿಡ್ ಕಾರ್ಯಾಚರಣೆಯಲ್ಲಿ ತೊಡಗುತ್ತಿರುವುದರಿಂದ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.