ಕಡಬ (ದಕ್ಷಿಣ ಕನ್ನಡ): ವಾರಿಯರ್ಗಳನ್ನು ಬಿಡದೆ ಕೊರೊನಾ ಕಾಡುತ್ತಿದ್ದು, ಇಂದು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಕಡಬದ ತಾಲೂಕಿನ ಹೊಸ್ಮಠ ನಿವಾಸಿಯಾಗಿರುವ ಮಹಿಳೆ ಕೊಯಿಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಇವರ ಗಂಟಲು ದ್ರವ ಮಾದರಿ ಪರೀಕ್ಷೆ ವರದಿಯು ಇಂದು ಬಂದಿದ್ದು, ಕೊರೊನಾ ದೃಢಪಟ್ಟಿದೆ.
ಈ ಹಿನ್ನೆಲೆ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸಹಿತ, 11 ಮಂದಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.