ಮಂಗಳೂರು: ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳ ಐಷಾರಾಮಿ ಕಾರನ್ನು ಮಂಗಳೂರು ಸಿಸಿಬಿ ಪೊಲೀಸರು ಮಾರಾಟ ಮಾಡಿದ ಪ್ರಕರಣದ ತನಿಖೆಯನ್ನು ರಾಜ್ಯ ಸಿಐಡಿ ಕೈಗೆತ್ತಿಕೊಂಡಿದೆ. ನಗರದ ಸಿಐಡಿ ಕಚೇರಿಯಲ್ಲಿ ಪ್ರಕರಣದಲ್ಲಿ ಶಾಮೀಲಾಗಿದ್ದಾರೆನ್ನಲಾದ ಆರೋಪಿಗಳ ತನಿಖೆಯು ಸಿಐಡಿ ಕಚೇರಿಯಲ್ಲಿ ನಡೆದಿದೆ.
ಸಿಐಡಿ ರಾಜ್ಯ ಪೊಲೀಸ್ ಅಧೀಕ್ಷಕ ಭೀಮಾಶಂಕರ್ ಹಾಗೂ ಇನ್ಸ್ಪೆಕ್ಟರ್ ಚಂದ್ರಪ್ಪ ನೇತೃತ್ವದ ತಂಡ ಮಂಗಳೂರಿಗೆ ಆಗಮಿಸಿ ತನಿಖೆ ನಡೆಸಿ ಬೆಂಗಳೂರಿಗೆ ಮತ್ತೆ ಮರಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಇಎನ್ಸಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಉಪ ನಿರೀಕ್ಷಕ ಕಬ್ಬಳ್ ರಾಜ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: 15 ದಿನಗಳಲ್ಲೇ 2ನೇ ಗ್ರಹಣ: ಜಗತ್ತಿಗೇ ಕಂಟಕ ಉಂಟಾಗಲಿದೆ ಎಂದು ಕಾಶಿ ಜ್ಯೋತಿಷಿ ಭವಿಷ್ಯ!
ಅಲ್ಲದೆ ಪ್ರಕರಣದ ಆಂತರಿಕ ವರದಿ ನೀಡಿರುವ ಮಂಗಳೂರು ನಗರದ ಹಿಂದಿನ ಡಿಸಿಪಿ ವಿನಯ್ ಗಾಂವ್ಕರ್, ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ನಾಯಕ್ ಅವರಿಂದಲೂ ಹೇಳಿಕೆ ಪಡೆದುಕೊಳ್ಳಲಾಗಿದೆ. ಈ ವರದಿಯನ್ನು ಸಿಐಡಿ ಅಧಿಕಾರಿಗಳು ಡಿಜಿ ಅವರಿಗೆ ಸಲ್ಲಿಸಲಿದ್ದಾರೆ. ಇದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಿಸಿಬಿ ಪೊಲೀಸರಿಂದ ಮಾರಾಟವಾದ ಜಾಗ್ವಾರ್ ಕಾರು ವಶಕ್ಕೆ ಪಡೆದ ಸಿಐಡಿ