ETV Bharat / state

ವಾಟ್ಸ್​​ಆ್ಯಪ್​​​​​​ ಬಳಸಿ ಜನರಿಂದ ಹಣ ಕೀಳುತ್ತಿದ್ದ ಚಾಲಾಕಿ ಗ್ರೂಪ್​​​​ ಅಡ್ಮಿನ್​​​​ ಸಿಸಿಬಿ ಬಲೆಗೆ

ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕುಂಡಡ್ಕ ಮನೆ ನಿವಾಸಿ ಅಬ್ದುಲ್ ರಶೀದ್ ಅಲಿಯಾಸ್ ರಶೀದ್ ಕುಂಡಡ್ಕ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಶೀದ್ ಕುಂಡಡ್ಕ ಕನಕ ಎಂಬ ವಾಟ್ಸ್​ಆ್ಯಪ್​​​​ ಗ್ರೂಪ್ ಅಡ್ಮಿನ್ ಆಗಿದ್ದು, ಸಾರ್ವಜನಿಕರಿಗೆ ಪ್ರಭಾವಿಗಳ ಹೆಸರನ್ನು ಹೇಳಿಕೊಂಡು ಕರೆ ಮಾಡುವ ಈತ ಹಣ ಸುಲಿಗೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

CCB police arrested whatsapp Group Admin for Frauds Money from people
ವಾಟ್ಸಾಪ್​​ ಬಳಸಿ ಜನರಿಂದ ಹಣ ಕೀಳುತ್ತಿದ್ದ ಚಾಲಾಕಿ ಗ್ರೂಪ್​​​​ ಅಡ್ಮಿನ್​​​​ ಸಿಸಿಬಿ ಬಲೆಗೆ
author img

By

Published : May 13, 2020, 6:46 PM IST

ಮಂಗಳೂರು (ದಕ್ಷಿಣ ಕನ್ನಡ): ಪೊಲೀಸ್ ಅಧಿಕಾರಿಗಳು, ಮಾಧ್ಯಮದವರ ಹಾಗೂ ರಾಜಕೀಯ ವ್ಯಕ್ತಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಕನಕ ವಾಟ್ಸ್​ಆ್ಯಪ್​​​​ ಗ್ರೂಪ್​​ನ ಅಡ್ಮಿನ್​​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕುಂಡಡ್ಕ ಮನೆ ನಿವಾಸಿ ಅಬ್ದುಲ್ ರಶೀದ್ ಅಲಿಯಾಸ್ ರಶೀದ್ ಕುಂಡಡ್ಕ(39) ಬಂಧಿತ ಆರೋಪಿ. ರಶೀದ್ ಕುಂಡಡ್ಕ ಕನಕ ಎಂಬ ವಾಟ್ಸ್​ಆ್ಯಪ್​​​​ ಗ್ರೂಪ್ ಅಡ್ಮಿನ್ ಆಗಿದ್ದು, ಈ ಗ್ರೂಪ್​ನಲ್ಲಿ ಸರ್ಕಾರಿ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು, ಮಾಧ್ಯಮದವರನ್ನು ಸದಸ್ಯರನ್ನಾಗಿಸಿದ್ದ. ಸಾರ್ವಜನಿಕರಿಗೆ ತನ್ನ ವಾಟ್ಸ್​ಆ್ಯಪ್​​​​​ ಗ್ರೂಪ್​​ನ ಹೆಸರನ್ನು ಹೇಳಿಕೊಂಡು ಕರೆ ಮಾಡುವ ಈತ ನಂಬಿಸಿ ಹಣ ಸುಲಿಗೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಈತನ ವಿರುದ್ಧ ಈ ಹಿಂದೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ. ಅಲ್ಲದೇ ಈತನ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಕೂಡಾ ತೆರೆಯಲಾಗಿದೆ.

ಆರೋಪಿ ರಶೀದ್ ಕುಂಡಡ್ಕ ಕುಖ್ಯಾತ ರೌಡಿ ಹಾಗೂ ಜ್ಯುವೆಲ್ಲರಿ ದರೋಡೆ ಪ್ರಕರಣವೊಂದರ ಪ್ರಮುಖ ಆರೋಪಿಯಾಗಿರುವ ಮುತ್ತಾಸಿಮ್ ಅಲಿಯಾಸ್ ತಸ್ಲಿಮ್ ಎಂಬಾತನ ಕೊಲೆ ಪ್ರಕರಣದಲ್ಲಿರುವ ವ್ಯಕ್ತಿಯೊಬ್ಬನ ಹೆಸರನ್ನು ಪ್ರಕರಣದಿಂದ ತೆಗೆಸುತ್ತೇನೆ. ತನಗೆ ಪೊಲೀಸ್ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿ 20 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟು, 4 ಲಕ್ಷ ರೂ. ಸುಲಿಗೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಈತನ ಮೇಲೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಇದೀಗ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್​​ಪೆಕ್ಟರ್​​ ಶಿವಪ್ರಕಾಶ್ ಆರ್. ನಾಯ್ಕ್, ಪಿಎಸ್ಐ ಹೆಚ್.ಡಿ.ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿ ಭಾಗವಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.