ಮಂಗಳೂರು : ಕಾಸರಗೋಡಿನಲ್ಲಿ ನಡೆಯಲಿರುವ ಬಿಜೆಪಿ ವಿಜಯ ಯಾತ್ರೆಗೆ ಚಾಲನೆ ನೀಡಲು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಸಂಜೆ 4ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದರು. ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಇತರ ನಾಯಕರು ಸ್ವಾಗತಿಸಿದರು.
ತಮಿಳುನಾಡು, ಪಶ್ಚಿಮ ಬಂಗಾಳದ ಜೊತೆಗೆ ಈ ವರ್ಷ ಕೇರಳದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ ಇಂದಿನಿಂದ ಕಾಸರಗೋಡಿನಲ್ಲಿ ವಿಜಯ ಯಾತ್ರೆ ರ್ಯಾಲಿ ನಡೆಸುತ್ತಿದೆ. ಇದಕ್ಕೆ ಚಾಲನೆ ನೀಡಲು ಯೋಗಿ ಆದಿತ್ಯನಾಥ್ ಆಮಿಸಿದ್ದಾರೆ. ಅವರು ವಿಮಾನ ನಿಲ್ದಾಣದಿಂದ ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ರಸ್ತೆ ಮಾರ್ಗದ ಮೂಲಕ ಕಾಸರಗೋಡಿಗೆ ತೆರಳಿದರು.
ಓದಿ: ಪಂಚಮಸಾಲಿ ಸಮುದಾಯ 2ಎ ಗೆ ಸೇರಿಸುವ ಬೇಡಿಕೆ ಈಡೇರದೆ ಮಠಕ್ಕೆ ಮರಳಲ್ಲ: ಕೂಡಲಸಂಗಮ ಶ್ರೀ
ಇಂದು ಸಂಜೆ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ವಿಜಯ ಯಾತ್ರೆಗೆ ಯೋಗಿ ಆದಿತ್ಯನಾಥ್ ಅವರು ಚಾಲನೆ ನೀಡಿ, ಪ್ರಧಾನ ಭಾಷಣ ಮಾಡಲಿದ್ದಾರೆ.
ಕಾಸರಗೋಡಿನಿಂದ ಆರಂಭವಾಗುವ ಈ ವಿಜಯಯಾತ್ರೆಯು ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ದಿನಗಳ ಕಾಲ ಸಂಚರಿಸಿ ಕೊನೆಗೆ ತಿರುವನಂತಪುರಂನಲ್ಲಿ ಸಮಾಪ್ತಿಯಾಗಲಿದೆ. ಬಳಿಕ ಅಲ್ಲಿಂದ ಹೊರಡುವ ಯೋಗಿ ಆದಿತ್ಯನಾಥ್ ಸಂಜೆ 6 ಗಂಟೆಗೆ ಕದ್ರಿ ಶ್ರೀಜೋಗಿ ಮಠಕ್ಕೆ ಆಗಮಿಸಲಿದ್ದಾರೆ.