ಬೆಳ್ತಂಗಡಿ, ದಕ್ಷಿಣ ಕನ್ನಡ: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿಯಾದ ಬಳಿಕ ಮೋಸ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಲಾಯಿಲ ಗ್ರಾಮದ ಕಿರಣ್ ಬಂಧಿತ ಆರೋಪಿಯಾಗಿದ್ದು, ಯುವತಿಯೊಂದಿಗೆ ಆತ್ಮೀಯತೆಯಿಂದ ಇದ್ದು, ಹುಡುಗಿಯ ಮನೆಗೆ ಆಗಾಗ ಹೋಗಿ ಬರುತ್ತಿದ್ದನು. ಇಬ್ಬರ ನಡುವೆ ಸಲುಗೆ ಬೆಳೆದು, ಮದುವೆಯಾಗುವುದಾಗಿಯೂ ಯುವತಿಯನ್ನು ನಂಬಿಸಿದ್ದನು.
ಆಕ್ಷೇಪಿಸಿದರೂ ಕೇಳದೇ, ಲೈಂಗಿಕವಾಗಿ ಬಳಸಿಕೊಂಡು, ಗರ್ಭವತಿಯಾಗಲು ಕಾರಣನಾಗಿದ್ದಾನೆ ಹಾಗೂ ತಾನು ಏಳೂವರೆ ತಿಂಗಳ ಗರ್ಭಿಣಿಯಾಗಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮೋಜಿಗಾಗಿ ಮಾದಕವಸ್ತು ಮಾರಾಟ: ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ಗಳು ಅರೆಸ್ಟ್