ಸುಳ್ಯ (ದಕ್ಷಿಣಕನ್ನಡ): ಸೂಟ್ಕೇಸ್ನಲ್ಲಿ ಸುಮಾರು 15 ಕೆ.ಜಿ. ಗೋಮಾಂಸ ತುಂಬಿಸಿ ಸಾಗಣೆ ನಡೆಸುತ್ತಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಕಲ್ಲುಮುಟ್ಲು ನಿವಾಸಿ ನಿಸಾರ್(30) ಬಂಧಿತ ಆರೋಪಿಯಾಗಿದ್ದು,ಆರೋಪಿಯಿಂದ ಸ್ಕೂಟರ್, 15 ಕೆ.ಜಿ. ಗೋಮಾಂಸವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈತ ಸುಳ್ಯದ ಗಾಂಧಿ ನಗರದಿಂದ ಸ್ಕೂಟರ್ನಲ್ಲಿ ಸೂಟ್ಕೇಸ್ ಒಂದನ್ನು ಹಿಡಿದುಕೊಂಡು ಹೋಗುತ್ತಿದ್ದನು. ಈತನ ಮೇಲೆ ಅನುಮಾನಗೊಂಡ ಪೊಲೀಸರು ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಗಾಂಧಿನಗರದಿಂದ ಪೈಚಾರು ಕಡೆಗೆ ಗ್ರಾಹಕರಿಗೆ ನೀಡಲು ಗೋಮಾಂಸ ಸಾಗಣೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.