ETV Bharat / state

ಡಿಸೆಂಬರ್ 1 ರಿಂದ ಹೆಜಮಾಡಿ ಟೋಲ್​ಗೇಟ್​ನಲ್ಲಿ ಹೆಚ್ಚುವರಿ ದರ ವಸೂಲಿ - ಸುರತ್ಕಲ್ ಎನ್​ಐಟಿಕೆ ಟೋಲ್ ಗೇಟ್ ರದ್ದು

ಸುರತ್ಕಲ್ ಟೋಲ್ ಗೇಟ್ ರದ್ದುಗೊಳಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದ್ದು, ಡಿಸೆಂಬರ್ 1 ರಿಂದ ಹೆಜಮಾಡಿ ಟೋಲ್​ಗೇಟ್​ನಲ್ಲಿ ಹೆಚ್ಚುವರಿ ದರ ವಸೂಲಿಯಾಗಲಿದೆ ಎಂದು ತಿಳಿಸಿದೆ.

hejamadi toll gate
ಹೆಜಮಾಡಿ ಟೋಲ್​ಗೇಟ್​
author img

By

Published : Nov 25, 2022, 9:48 AM IST

ಮಂಗಳೂರು: ಭಾರಿ ಹೋರಾಟದ ಬಳಿಕ ಸುರತ್ಕಲ್ ಎನ್​ಐಟಿಕೆ ಟೋಲ್ ಗೇಟ್ ರದ್ದುಗೊಳಿಸಿ ಸಮೀಪದ ಟೋಲ್‌ಗೇಟ್​ಗೆ ವಿಲೀನಗೊಳಿಸಲಾಗಿದ್ದು, ಡಿಸೆಂಬರ್ 1 ರಿಂದ ಹೆಜಮಾಡಿ ಟೋಲ್​ಗೇಟ್​ನಲ್ಲಿ ಹೆಚ್ಚುವರಿ ದರ ವಸೂಲಿ ಶುರುವಾಗಲಿದೆ.

ಸುರತ್ಕಲ್ ಎನ್‌ಐಟಿಕೆ ಟೋಲ್​ಗೇಟ್​ ಅನ್ನು ಹೆಜಮಾಡಿ ಟೋಲ್ ಜತೆ ವಿಲೀನಗೊಳಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಈ‌ ಸಂಬಂಧ ಉಡುಪಿ ಜಿಲ್ಲಾಡಳಿತಕ್ಕೆ ಪ್ರಾಧಿಕಾರ ಪತ್ರ ಬರೆದಿದೆ. ಡಿ.1ರಿಂದ ಅನ್ವಯವಾಗುವಂತೆ ಸುರತ್ಕಲ್ ಟೋಲ್‌ ವಿಲೀನಗೊಂಡಿದ್ದು, ಇದರಿಂದ ಹೆಜಮಾಡಿಯಲ್ಲಿ ಟೋಲ್ ದರ ದುಬಾರಿಯಾಗಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಸುರತ್ಕಲ್‌ ಟೋಲ್ ರದ್ದು- ಕಟೀಲ್; ಹಣ ಸಂಗ್ರಹ ಸ್ಥಗಿತಗೊಳ್ಳುವವರೆಗೂ ಹೋರಾಟ-ಮುನೀರ್ ಕಾಟಿಪಳ್ಳ

ಟೋಲ್ ಸಂಗ್ರಹ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ ನೋಡಿಕೊಳ್ಳಬೇಕು.‌ ಟೋಲ್​ ವಿಲೀನದ ಬಳಿಕ ಸುಂಕ ದರ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜತೆಗಿನ ರಾಜ್ಯ ಸರ್ಕಾರದ ಒಪ್ಪಂದದಂತೆ ಸರ್ಕಾರವೇ ನಷ್ಟವನ್ನು ಭರಿಸಬೇಕು. ಉಡುಪಿ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಾಯ, ನೆರವು, ಪೊಲೀಸ್ ಭದ್ರತೆ ಒದಗಿಸಬೇಕು. ಜೊತೆಗೆ ಟೋಲ್​ಗೇಟ್​ನಲ್ಲಿ ಹೆಚ್ಚುವರಿ ದರ ವಸೂಲಿ ಡಿ.1ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಪತ್ರದಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಚ್.ಎಸ್. ಲಿಂಗೇಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: ಬಹು ದಿನಗಳ ಹೋರಾಟದ ಬಳಿಕ ಸುರತ್ಕಲ್ ಟೋಲ್ ಗೇಟ್ ರದ್ದು: ನಳಿನ್ ಕುಮಾರ್ ಕಟೀಲ್ ಟ್ವೀಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.