ಮಂಗಳೂರು: ನನಗೆ ಕಾನೂನು ಹಾಗೂ ನ್ಯಾಯಾಲಯದ ಮೇಲೆ ಸಂಪೂರ್ಣ ಭರವಸೆ ಇದೆ. ನಾನು ಗೆದ್ದೇ ಗೆಲ್ಲುವೆನೆಂಬ ಭರವಸೆಯೂ ನೂರು ಪ್ರತಿಶತದಷ್ಟಿದೆ. ಇದಕ್ಕಾಗಿ ಎಲ್ಲರೂ ಕಾಯಬೇಕಷ್ಟೇ. ಈಗ ನಾನು ಏನು ಹೇಳಲಾರೆ ಎಂದು ಖ್ಯಾತ ನಟಿ ಪದ್ಮಜಾ ರಾವ್ ಹೇಳಿದರು.
ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ನಟಿ ಪದ್ಮಜಾ ರಾವ್ ಇಂದು ನ್ಯಾಯಾಲಯದ ಮುಂದೆ ಹಾಜರಾದರು. ಬಳಿಕ ಮಾಧ್ಯದೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಬಂದಿರುವ ಆರೋಪದ ಬಗ್ಗೆ ಹೋರಾಡಲು ಕೋರ್ಟ್, ಕಚೇರಿ ಇದೆ. ಈ ಪ್ರಕರಣದಲ್ಲಿ ನಾನು ಗೆದ್ದೇ ಗೆಲ್ಲುತ್ತಾನೆ ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ:
ನಟ, ನಿರ್ದೇಶಕ ವೀರೇಂದ್ರ ಶಟ್ಟಿ ಒಡೆತನದ ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಟಿ ಪದ್ಮಜಾ ಅವರು ಹಂತ ಹಂತವಾಗಿ 41 ಲಕ್ಷ ರೂ. ಸಾಲ ಪಡೆದಿದ್ದರು. ಸಾಲದ ಭದ್ರತೆಗೆ ಅವರು 40 ಲಕ್ಷ ರೂ. ಚೆಕ್ ನೀಡಿದ್ದರು. ಪದ್ಮಜಾ ಅವರು ಸಾಲದ ಹಣ ಮರು ನೀಡದ ಹಿನ್ನೆಲೆ ಬ್ಯಾಂಕ್ಗೆ ಚೆಕ್ ಹಾಕಲಾಗಿತ್ತು. ಆದರೆ, ಬ್ಯಾಂಕ್ನಲ್ಲಿ ಹಣವಿಲ್ಲದ ಸಂಬಂಧ ಚೆಕ್ ಬೌನ್ಸ್ ಆಗಿತ್ತು.
ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದ್ದರಿಂದ ಮಂಗಳೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿರುವ ಸಮನ್ಸ್ ಸ್ವೀಕರಿಸಲು ನಿರಾಕರಿಸುತ್ತಿದ್ದ ಪದ್ಮಜಾರಾವ್ಗೆ ವಾರೆಂಟ್ ಜಾರಿಯಾಗಿತ್ತು. ಈ ಸಂಬಂಧ ಅವರು ಇಂದು ಮಂಗಳೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರಾದರು.