ETV Bharat / state

‘ಕುಲಪತಿ ಹುದ್ದೆಗೆ ಲಂಚ ನೀಡಿದ ಪ್ರೊಫೆಸರ್ ಹುದ್ದೆ ಬದಲಾವಣೆ, ಸಿಂಡಿಕೇಟ್ ಸಭೆಯಲ್ಲಿ ಮುಂದಿನ ನಿರ್ಣಯ’ - ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ .ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ

ಮಂಗಳೂರು ವಿಶ್ವವಿದ್ಯಾನಿಲಯದ  ಪ್ರೊ. ಜಯಶಂಕರ್ ಅವರು ಲಂಚ ನೀಡಿದ ಪ್ರಕರಣದಲ್ಲಿ ಕುಲಪತಿಗಳ ಗಮನಕ್ಕೆ ತಾರದೇ ಪೊಲೀಸ್ ದೂರನ್ನು ಯಾಕೆ ಕೊಟ್ಟಿದ್ದೀರಿ ಎಂದು ನೋಟಿಸ್ ನೀಡಲಾಗಿತ್ತು. ಅದಕ್ಕೆ ಅವರು ಉತ್ತರವನ್ನು ನೀಡಿದ್ದು, ಅದನ್ನು ಸಿಂಡಿಕೇಟ್ ಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಅವರು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದರು.

mangaluru university vice chancellor prof. ps yedapaditthaya

author img

By

Published : Apr 8, 2021, 7:44 PM IST

ಮಂಗಳೂರು (ದ.ಕ): ಇತ್ತೀಚೆಗೆ ರಾಯಚೂರು ಉಪಕುಲಪತಿ ಸ್ಥಾನ ಪಡೆಯಲು ರಾಮಸೇನೆ ಮುಖಂಡನಿಗೆ ಹಣ ನೀಡಿ ವಂಚನೆಗೊಳಗಾದ ಮಂಗಳೂರು ವಿವಿಯ ಪ್ರೊಫೆಸರ್ ಅವರ ಹುದ್ದೆ ಬದಲಾವಣೆ ಮಾಡಲಾಗಿದ್ದು, ‌ಮುಂದಿನ ನಿರ್ಣಯವನ್ನು ಸಿಂಡಿಕೇಟ್ ಸಭೆ ತೆಗೆದುಕೊಳ್ಳಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ತಿಳಿಸಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ. ಜಯಶಂಕರ್ ಅವರು ಲಂಚ ನೀಡಿದ ಪ್ರಕರಣದಲ್ಲಿ ಕುಲಪತಿಗಳ ಗಮನಕ್ಕೆ ತಾರದೇ ಪೊಲೀಸ್ ದೂರನ್ನು ಯಾಕೆ ಕೊಟ್ಟಿದ್ದೀರಿ ಎಂದು ನೋಟಿಸ್ ನೀಡಲಾಗಿತ್ತು. ಅದಕ್ಕೆ ಅವರು ಉತ್ತರವನ್ನು ನೀಡಿದ್ದಾರೆ. ಅದನ್ನು ಸಿಂಡಿಕೇಟ್ ಸಭೆಯಲ್ಲಿ ಮಂಡಿಸಲಾಗುವುದು. ಅಲ್ಲಿ ಅವರು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಪತ್ರಿಕಾಗೋಷ್ಠಿ

ಪ್ರೊ. ಜಯಶಂಕರ್ ಅವರು ಮೈಕ್ರೊಬಯಲಾಜಿ ಪ್ರೊಪೆಸರ್ ಆಗಿದ್ದು ಅವರನ್ನು ಕಾಲೇಜು ಅಭಿವೃದ್ಧಿ ಸಮಿತಿ ಡೈರೆಕ್ಟರ್ ಮಾಡಲಾಗಿತ್ತು. ಲಂಚ ನೀಡಿದ ಪ್ರಕರಣ ಬೆಳಕಿಗೆ ಬಂದ ಬಳಿಕ ಅವರನ್ನು ಆ ಹುದ್ದೆಯಿಂದ ತೆರವು ಗೊಳಿಸಲಾಗಿದೆ. ಇದರಿಂದ ತೆರವುಗೊಳಿಸಿದ ಬಳಿಕ ಅವರನ್ನು ವಿದೇಶಿ ವಿದ್ಯಾರ್ಥಿಗಳ ಸೆಲ್​ಗೆ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ .ಇದು ಈ ಮೊದಲಿನ ಹುದ್ದೆಯಷ್ಟು ಪ್ರಮುಖ ಹುದ್ದೆಯಲ್ಲ ಎಂದು ತಿಳಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.