ಬೆಳ್ತಂಗಡಿ (ದಕ್ಷಿಣಕನ್ನಡ) : ತಾಲೂಕಿನ ಕಲ್ಮಂಜ ಗ್ರಾಮ ಪಂಚಾಯತ್ ಕಚೇರಿಗೆ ಎಸಿಬಿ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.
ಕಲ್ಮಂಜ ಗ್ರಾಮ ಪಂಚಾಯತ್ ತಾತ್ಕಾಲಿಕ ಡಾಟಾ ಆಪರೇಟರ್ ರಮೇಶ್ ಕುಟುಂಬಕ್ಕೆ ಕಳೆದ ನಾಲ್ಕೈದು ವರ್ಷಗಳಲ್ಲಿ ಗ್ರಾಮ ಪಂಚಾಯತ್ ವಸತಿ ಯೋಜನೆಯ ಎರಡು ಮನೆಗಳು ಮಂಜೂರಾಗಿವೆ. ಅವರು ವಾಸ್ತವ್ಯವಿರುವ ಮನೆ ಅವರ ಅತ್ತಿಗೆಯ ಹೆಸರಿನಲ್ಲಿದೆ. ಮನೆಗೆ ಹಲವು ಡೋರ್ ನಂಬರ್ಗಳಿವೆ ಎಂದು ಸಚಿನ್‍ಕುಮಾರ್ ಎಂಬುವರು ದೂರು ನೀಡಿದ್ದರು.
ಹೀಗಾಗಿ ಮಂಗಳೂರಿನಿಂದ ಎಸಿಬಿ ಅಧಿಕಾರಿಗಳು ಗ್ರಾಮ ಪಂಚಾಯತ್ಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.