ETV Bharat / state

ಮಳೆ ನೀರು ಇಂಗಿಸುವಿಕೆಗೆ ವಿಶಿಷ್ಟ ವ್ಯವಸ್ಥೆ: ಮಾದರಿಯಾದ ಮಂಗಳೂರಿನ ಮಸೀದಿ

ಮಂಗಳೂರು ಹೊರವಲಯದ ಫಜೀರಿನ ಮಸೀದಿಯಲ್ಲಿ ಮಳೆ ನೀರು ಇಂಗಿಸುವಿಕೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಈ ಮೂಲಕ ಮಸೀದಿ ಆಡಳಿತ ಸಮಿತಿ ಇತರರಿಗೆ ಮಾದರಿಯಾಗಿದೆ.

Rain Harvesting in Masjid
ಮಾದರಿಯಾದ ಮಂಗಳೂರಿನ ಮಸೀದಿ
author img

By

Published : Jun 10, 2021, 12:21 PM IST

ಮಂಗಳೂರು: ಭೂಮಿಯ ಅಂತರ್ಜಲ ಮಟ್ಟ ಹೆಚ್ಚಿಸಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ಮಳೆ ನೀರು ಇಂಗಿಸುವ ವಿಧಾನವನ್ನು ಎಲ್ಲೆಡೆ ಪ್ರೋತ್ಸಾಹಿಸಲಾಗ್ತಿದೆ. ಸರ್ಕಾರ ಕೂಡ ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ಕ್ರಮೇಣ ಈ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಮಂಗಳೂರಿನ ಮಸೀದಿಯೊಂದು ಈ ನಿಟ್ಟಿನಲ್ಲಿ ಮಾದರಿಯಾಗಿದೆ.

ಮಂಗಳೂರು ನಗರದ ಹೊರವಲಯ ಫಜೀರ್​ನಲ್ಲಿ ವ್ಯವಸ್ಥಿತವಾಗಿ ನೀರು ಇಂಗಿಸುವ ವಿಧಾನ ಅಳವಡಿಸಿಕೊಳ್ಳುವ ಮೂಲಕ ಮಸೀದಿಯನ್ನು ನವೀಕರಣ ಮಾಡಲಾಗಿದೆ. ಮಳೆ ನೀರು ಎಲ್ಲೂ ಪೋಲಾಗದೆ ಬಾವಿ ಮತ್ತು ಬೋರ್​ವೆಲ್​​ಗೆ ಸೇರುವಂತೆ ಇಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.

ವಿಶೇಷ ಮಳೆ ಕೊಯ್ಲು ಬಗ್ಗೆ ಮಾಹಿತಿ ನೀಡಿದ ಮಸೀದಿ ಆಡಳಿತ ಮಂಡಳಿ ಸದಸ್ಯರು

ಫಜೀರ್​​ನ ಜುಮ್ಮಾ ಮಸೀದಿಯನ್ನು 2008ರಲ್ಲಿ ನವೀಕರಣ ಮಾಡಲಾಗಿದೆ. ಮಸೀದಿ ನವೀಕರಣ ವೇಳೆ ಹಲವು ವರ್ಷಗಳಿಂದ ಕಾಡುತ್ತಿದ್ದ ನೀರಿನ ಅಭಾವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾದ ಆಡಳಿತ ಸಮಿತಿಯವರು ಆಧುನಿಕ ಮಳೆ ನೀರು ಇಂಗಿಸುವ ವಿಧಾನವನ್ನು ವ್ಯವಸ್ಥಿತವಾಗಿ ಅಳವಡಿಸಿಕೊಂಡಿದ್ದಾರೆ.

ಮಸೀದಿಯಲ್ಲಿ ನಮಾಜ್ ಮಾಡಲು ಬರುವವರಿಗೆ ಅಂಗಶುದ್ದಿಗೆ ನೀರು ಅಗತ್ಯ. ಫಜೀರ್​ ಮಸೀದಿಯಲ್ಲಿ ಭಾರೀ ನೀರಿನ ಸಮಸ್ಯೆ ಇತ್ತು. ಇದಕ್ಕಾಗಿ ಮಳೆ ನೀರು ಮಸೀದಿ ನವೀಕರಣದ ವೇಳೆ ಮಳೆ ನೀರು ಇಂಗಿಸುವಿಕೆಯ ಪ್ರಯತ್ನ ಮಾಡಿದ್ದಾರೆ. ಮಸೀದಿಯ ಟೆರೆಸ್ ಮೇಲೆ ಬೀಳುವ ಮಳೆ ನೀರು ನೇರವಾಗಿ ಬಾವಿಗೆ ಮತ್ತು ಬೋರ್​ವೆಲ್ ಗೆ ಹೋಗುವಂತೆ ಮಾಡಲಾಗಿದೆ.

ಮಸೀದಿ ಕಟ್ಟಡದ ಆಧಾರಕ್ಕೆ ಮತ್ತು ಸೌಂದರ್ಯಕ್ಕೆ ನಿರ್ಮಾಣ ಮಾಡಲಾದ ಫಿಲ್ಲರ್​ಗಳ ಒಳಭಾಗದಲ್ಲಿ ಪೈಪ್ ಅಳವಡಿಸಲಾಗಿದೆ. ಆ ಪೈಪ್​ಗಳ ಮೂಲಕ ಟೆರೆಸ್ ಮೇಲೆ ಸಂಗ್ರಹವಾಗುವ ಮಳೆ ನೀರನ್ನು ಬೋರ್ ವೆಲ್ ಮತ್ತು ಬಾವಿಗೆ ಹರಿಸಲಾಗುತ್ತಿದೆ. ಬೋರ್​ವೆಲ್ ಮತ್ತು ಬಾವಿಯ ತಳಭಾಗದವರೆಗೆ ನೀರು ಹೋಗುವಂತಹ ವ್ಯವಸ್ಥೆ ಮಾಡಲಾಗಿದೆ. ಟೆರೆಸ್​ನಲ್ಲಿ ಒಂದು ಹಂತಕ್ಕೆ ಏರಿದ ಬಳಿಕ ಸಂಗ್ರಹವಾಗುವ ನೀರನ್ನು ಬೋರ್​​ವೆಲ್​ನಲ್ಲಿ ಶೇಖರವಾಗುವಂತೆ ಮಾಡಲಾಗಿದೆ.

ಇದು ಶುದ್ದ ನೀರಾಗಿರುವುದರಿಂದ, ಕುಡಿಯಲು ಮತ್ತು ಮಸೀದಿಯ ಅಧೀನದಲ್ಲಿರುವ ಕಟ್ಟಡಗಳ ಉಪಯೋಗಕ್ಕೆ ನೀಡಲಾಗ್ತಿದೆ. ಫಿಲ್ಲರ್​ಗಳ ಮೂಲಕ ಬಾವಿಗೂ ಪೈಪ್​ ಅಳವಡಿಸಲಾಗಿದೆ. ಇದರ ಮೂಲಕ ಟೆರೆಸ್​ ಮೇಲಿನ ನೀರು ನೇರವಾಗಿ ಬಾವಿ ಸೇರ್ತಿದೆ. ಅಲ್ಲದೆ ನಮಾಜ್ ಅಂಗಶುದ್ದಿಗೆ ಬಳಸಿದ ನೀರು ಕೂಡ ಬಾವಿಗೆ ಸೇರುತ್ತಿದೆ. ಬಾವಿಯು ಮಸೀದಿ ಮುಂಭಾಗದಲ್ಲೇ ಇದ್ದು, ಅದಕ್ಕೆ ಕಾಂಕ್ರೀಟ್ ಹಾಕಿ ಹುಲ್ಲಿನಿಂದ ಮುಚ್ಚಲಾಗಿದೆ. ಇಲ್ಲಿ ಶೇಖರವಾಗುವ ನೀರನ್ನು ಮಸೀದಿಯ ಸುತ್ತಲೂ ಇರುವ ಗಿಡಮರಗಳಿಗೆ ಬಳಸಲಾಗುತ್ತದೆ.

ಈ ಮಸೀದಿ ನವೀಕರಣದ ಮೊದಲು ಇಲ್ಲಿ ನೀರಿನ ಸಮಸ್ಯೆ ಬಹಳಷ್ಟಿತ್ತು. ಆದರೆ ಮಳೆ ನೀರು ಇಂಗಿಸುವಿಕೆ ವಿಧಾನ ಅಳವಡಿಸಿಕೊಂಡ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಮಾತ್ರವಲ್ಲದೆ, ಪಂಚಾಯತ್​ ಬೋರ್​ವೆಲ್​​ನಲ್ಲಿ ನೀರಿನ ಸಮಸ್ಯೆ ಎದುರಾದರೆ ಗ್ರಾಮಸ್ಥರಿಗೆ ಮಸೀದಿಯ ಬೋರ್​ವೆಲ್​ನಿಂದಲೇ ನೀರು ಕೊಡಲಾಗ್ತಿದೆ. ಮಸೀದಿ ಸಮಿತಿಯ ಈ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.