ETV Bharat / state

ನಿರ್ವಹಣೆಯಿಲ್ಲದೇ ಕುಸಿದು ಬೀಳುವ ಹಂತದಲ್ಲಿದೆ ಕಡಬದ ಬೃಹತ್ ನೀರಿನ ಟ್ಯಾಂಕ್​​ - kadaba water tank problem

1979ರಲ್ಲಿ ಉದ್ಘಾಟನೆಗೊಂಡ ಕಡಬದ ಬೃಹತ್ ನೀರಿನ ಟ್ಯಾಂಕ್ ನಿರ್ವಹಣೆಯಿಲ್ಲದೇ ಕುಸಿದು ಬೀಳುವ ಹಂತ ತಲುಪಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

kadaba water tank problem
ನಿರ್ವಹಣೆಯಿಲ್ಲದೇ ಕುಸಿದು ಬೀಳುವ ಹಂತದಲ್ಲಿದೆ ಕಡಬದ ಬೃಹತ್ ನೀರಿನ ಟ್ಯಾಂಕ್
author img

By

Published : Mar 23, 2021, 5:59 PM IST

Updated : Mar 23, 2021, 7:55 PM IST

ಕಡಬ (ದಕ್ಷಿಣಕನ್ನಡ): ಹಲವಾರು ವರ್ಷಗಳ ಹಿನ್ನೆಲೆಯಿರುವ ಕಡಬದ ಬೃಹತ್ ನೀರಿನ ಟ್ಯಾಂಕ್ ಕುಸಿದು ಬೀಳುವ ಹಂತ ತಲುಪಿದೆ.

ನಿರ್ವಹಣೆಯಿಲ್ಲದೇ ಕುಸಿದು ಬೀಳುವ ಹಂತದಲ್ಲಿದೆ ಕಡಬದ ಬೃಹತ್ ನೀರಿನ ಟ್ಯಾಂಕ್

1977-78ನೇ ಇಸವಿಯಲ್ಲಿ ಸಯ್ಯದ್ ಮೀರಾ ಸಾಹೇಬ್ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಅಂದಿನ ಇಂಜಿನಿಯರ್ ಸಿ.ಎಂ.ಪಾಲಾಕ್ಷ ಎಂಬುವವರ ಮೇಲುಸ್ತುವಾರಿಯಲ್ಲಿ ನಿರ್ಮಾಣವಾಗಿ, 1979ರಲ್ಲಿ ಉದ್ಘಾಟನೆಗೊಂಡ ಈ ಬೃಹತ್ ನೀರಿನ ಟ್ಯಾಂಕ್ ನಿರ್ವಹಣೆಯಿಲ್ಲದೇ ಕುಸಿದು ಬೀಳುವ ಹಂತ ತಲುಪಿದೆ.

ಟ್ಯಾಂಕ್​ನ ಅರ್ಧದಷ್ಟು ಭಾಗ ಕೆಸರು, ಗಲೀಜು ತುಂಬಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ನೀರನ್ನು ಇಡೀ ಕಡಬ ನಗರಕ್ಕೆ ನೀಡಲಾಗುತ್ತಿದೆ. ಈ ಬೃಹತ್ ಗಾತ್ರದ ಟ್ಯಾಂಕ್​ನ ಕಂಬಗಳು ಬಿರುಕು ಬಿಟ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎನ್ನಲಾಗಿದೆ.

ಆಕಸ್ಮಿಕವಾಗಿ ನೀರಿನ ಟ್ಯಾಂಕ್ ಏನಾದರೂ ಕುಸಿದು ಬಿದ್ದರೆ ಗ್ರಾಮ ಕರಣಿಕರ ಕಚೇರಿ, ಪಟ್ಟಣ ಪಂಚಾಯಿತಿ ಸೇರಿದಂತೆ ವಾಣಿಜ್ಯ ಕಟ್ಟಡಗಳಿಗೂ ಹಾನಿಯಾಗುವ ಸಂಭವವಿದೆ.

ಓದಿ: ಕಾಂಗ್ರೆಸ್‌ನಿಂದ ಸಿಡಿ ಕೇಸ್‌ ರೀವೈಂಡ್.. ಧರಣಿ ಮುಂದುವರೆಸಿದ್ದರಿಂದ ನಾಳೆಗೆ ಕಲಾಪ ಮುಂದೂಡಿಕೆ

Last Updated : Mar 23, 2021, 7:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.