ಉಳ್ಳಾಲ (ಮಂಗಳೂರು): ಗಂಟಲಲ್ಲಿ ಚಾಕೊಲೆಟ್ ಸಿಲುಕಿ ಬಾಲಕ ಮೃತಪಟ್ಟ ಘಟನೆ ಉಳ್ಳಾಲ ಕೆ.ಸಿ.ರೋಡ್ ನ ಉಚ್ಚಿಲ ಗುಡ್ಡೆಯಲ್ಲಿ ನಡೆದಿದೆ.
ರಹೀಂ ಎಂಬುವವರ 8 ವರ್ಷದ ಮಗ ಪೈಝಾನ್ ಮೃತ ಬಾಲಕ. ಈತನ ಗಂಟಲಲ್ಲಿ ಚಾಕೊಲೆಟ್ ಸಿಲುಕಿದ ಪರಿಣಾಮ ಉಸಿರಾಡಲು ಸಾಧ್ಯವಾಗಲಿಲ್ಲ. ತಕ್ಷಣ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಿಸದೆ ಬಾಲಕ ಸಾವಿಗೀಡಾಗಿದ್ದಾನೆ.