ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 316 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಇಂದು ಕೊರೊನಾ ದೃಢಪಟ್ಟ 316 ಮಂದಿಯಲ್ಲಿ ಮಂಗಳೂರು ತಾಲೂಕಿನ 190, ಬಂಟ್ವಾಳ ತಾಲೂಕಿನ 40, ಪುತ್ತೂರು ತಾಲೂಕಿನ 21, ಸುಳ್ಯ ತಾಲೂಕಿನ 16, ಬೆಳ್ತಂಗಡಿ ತಾಲೂಕಿನ 16 ಮಂದಿಗೆ ಮತ್ತು ಹೊರಜಿಲ್ಲೆಯ 33 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 13,795 ಮಂದಿಗೆ ಕೊರೊನಾ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇಂದು ಮೂರು ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಇಬ್ಬರು ಮಂಗಳೂರು ತಾಲೂಕು ಮತ್ತು ಒಬ್ಬರು ಹೊರ ಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 384 ಕ್ಕೆ ಏರಿಕೆಯಾಗಿದೆ.
ಇನ್ನು ಜಿಲ್ಲೆಯಲ್ಲಿ ಇಂದು 208 ಮಂದಿ ಗುಣಮುಖರಾಗಿದ್ದು ಈವರೆಗೆ 10,706 ಮಂದಿ ಗುಣಮುಖರಾಗಿದ್ದಾರೆ. 2,705 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.