ETV Bharat / state

ಮಂಗಳೂರು: ಸೈನಿಕನೆಂದು ಹೇಳಿ ಮನೆ ಬಾಡಿಗೆ ನೆಪದಲ್ಲಿ ಹಿರಿಯ ನಾಗರಿಕನಿಗೆ 2.41 ಲಕ್ಷ ರೂ. ವಂಚನೆ

ಮನೆ ಬಾಡಿಗೆ ಹೆಸರಲ್ಲಿ ಹಿರಿಯ ನಾಗರಿಕರೊಬ್ಬರಿಗೆ 2 ಲಕ್ಷ ರೂ ವಂಚನೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಹಿರಿಯ ನಾಗರಿಕರೊಬ್ಬರಿಗೆ 2.41 ಲಕ್ಷ ರೂ ವಂಚನೆ

author img

By ETV Bharat Karnataka Team

Published : Dec 19, 2023, 1:28 PM IST

Updated : Dec 19, 2023, 1:38 PM IST

ಮಂಗಳೂರು: ಮನೆ ಬಾಡಿಗೆ ಕೊಡುವ ಜಾಹೀರಾತು ನೀಡಿದ್ದ ಹಿರಿಯ ನಾಗರಿಕರಿಗೆ ಸೈನಿಕನೆಂದು ಹೇಳಿ 2.41 ಲಕ್ಷ ರೂಪಾಯಿ ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.

ಹಿರಿಯ ನಾಗರೀಕರೊಬ್ಬರು ಅಪಾರ್ಟ್ ಮೆಂಟ್ ಬಾಡಿಗೆ ನೀಡುವ ಬಗ್ಗೆ ಆನ್​ಲೈನ್​ ಸೈಟ್​ವೊಂದರಲ್ಲಿ ಜಾಹೀರಾತು ನೀಡಿದ್ದರು. ಡಿಸೆಂಬರ್ 8 ರಂದು ಯಾರೋ ಅಪರಿಚಿತ ವ್ಯಕ್ತಿ ತಾನು ಆಶೀಶ್ ಕುಮಾರ್ ಹಾಗೂ ತಾನು ಭಾರತೀಯ ಸೇನೆಯಲ್ಲಿ ನೌಕರನಾಗಿರುವುದಾಗಿ ತಿಳಿಸಿ ಮಾತನಾಡಿದ್ದಾನೆ.

ಆನ್​ಲೈನ್​ ಸೈಟ್​​ನಲ್ಲಿ ಅಪಾರ್ಟ್​ಮೆಂಟ್ ಖಾಲಿ ಇರುವ ಬಗ್ಗೆ ಮಾತನಾಡಿ ನಂತರ ಬಾಡಿಗೆ ವಿಷಯವಾಗಿ ಅವರಲ್ಲಿ ವಿಚಾರಿಸಿಕೊಂಡು ನಂತರ ಮುಂಗಡ ಹಣ ಪಾವತಿಸುವುದಾಗಿಯೂ ಹಾಗೂ ಆರ್ಮಿ ಇಲಾಖೆಯಿಂದ ಕಮಾಂಡಿಂಗ್ ಪೇಮೆಂಟ್ ನಿಂದ ಹಣ ಸಂದಾಯವಾಗುವುದಾಗಿ ತಿಳಿಸಿದ್ದಾನೆ. ವಂಚನೆಗೊಳಗಾದವರು ಮೊದಲಿಗೆ 1/-ರೂ,5/-ರೂ., 49,999/-ರೂ. ಮತ್ತು 49994/-ರೂಗಳ UPI CODE ಗಳನ್ನು ವಾಟ್ಸ ಆಪ್ ಮುಖಾಂತರ ಕಳುಹಿಸಿದ್ದಾರೆ. ನಂತರ ಸತ್ಯವೆಂದು ಭಾವಿಸಿ ತಮ್ಮ ಬಾಬ್ತು ಹೆಚ್​ಡಿಎಫ್​ಸಿ ಬ್ಯಾಂಕ್, ಮಲ್ಲೇಶ್ವರಂ ಶಾಖೆ ಖಾತೆ ನಂಬರ್​ನಿಂದ ಗೂಗಲ್ ಪೇ ಮುಖಾಂತರ ದಿನಾಂಕ ಡಿಸೆಂಬರ್ 8 ರಂದು 1,41,999/-ರೂ ಪಾವತಿಸಿರುತ್ತಾರೆ.

ನಂತರ ದಿನಾಂಕ ಡಿಸೆಂಬರ್ 9 ರಂದು ಈ ಅಪರಿಚಿತ ವ್ಯಕ್ತಿ ಮತ್ತೊಮ್ಮೆ ಕರೆ ಮಾಡಿ ಅದೇ ರೀತಿ ಮತ್ತೊಮ್ಮೆ ಪಾವತಿ ಮಾಡಬೇಕೆಂದು ಹಾಗೂ ಈ ಹಣ ಆರ್ಮಿ ಇಲಾಖೆಯಿಂದ ಕಮಾಂಡಿಂಗ್ ಪೇಮೆಂಟ್ ನಿಂದ ದೊರೆಯುವುದಾಗಿ ನಂಬಿಸಿದ್ದಾನೆ. ಹಿರಿಯ ನಾಗರಿಕರು ಅದೇ ರೀತಿ ಐಎಂಪಿ ಎಸ್​ ಮುಖಾಂತರ 1,00,000/-ರೂ ಹಣ ಪಾವತಿಸಿರುತ್ತಾರೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಆನ್​ಲೈನ್ ಮುಖಾಂತರ ಆಶೀಶ್ ಕುಮಾರ್ ಎಂದು ಪರಿಚಯಿಸಿಕೊಂಡು ತಾನು ಆರ್ಮಿಯಲ್ಲಿ ನೌಕರನೆಂದು ಹಿರಿಯ ನಾಗರಿಕರಿಗೆ ನಂಬಿಸಿ ಆನ್​ಲೈನ್ ಮುಖಾಂತರ ಒಟ್ಟು 2,41,999/- ರೂಗಳನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾನೆ. ಈ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೆನ್ ಪೊಲೀಸ್ ಠಾಣೆಯಲ್ಲಿ ವಂಚೆನಗೊಳಗಾದವರು ದೂರು ನೀಡಿದ್ದಾರೆ.

ಆನ್​ಲೈನ್​ ವಂಚನೆ ತಡೆಯಲು ಸೇಫ್​​ಬ್ರೌಸ್​ ಆ್ಯಪ್​ ಸಿದ್ಧ: ಆನ್​ಲೈನ್ ಮೂಲಕ ಹಣಕಾಸು ವಂಚನೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರದ ಅಧೀನ ಸ್ಟಾರ್ಟ್ ಅಪ್ ಸಂಸ್ಥೆ ಸೈಸೆಕ್ ಹೊಸ ಆ್ಯಪ್ ಸಿದ್ಧಪಡಿಸಿದೆ. ಬ್ರೌಸ್​ ಸೇಫ್ ಎನ್ನುವ ಆ್ಯಪ್ ಸಿದ್ಧಪಡಿಸಿದ್ದು, ಈ ಆ್ಯಪ್ ಬಳಸಿದರೆ ಲಿಂಕ್​ಗಳನ್ನು ಒತ್ತಿ ಹಣ ಕಳೆದುಕೊಳ್ಳುವುದಕ್ಕೆ ಬ್ರೇಕ್ ಬೀಳಲಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಸೈಟ್​ ಕೊಡಿಸೋದಾಗಿ ₹30 ಲಕ್ಷ ವಂಚನೆ: ಅಮೆರಿಕದಿಂದ ಪೊಲೀಸ್ ಕಮೀಷನರ್​ಗೆ ದೂರು ನೀಡಿದ ವ್ಯಕ್ತಿ

Last Updated : Dec 19, 2023, 1:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.