ಚಿತ್ರದುರ್ಗ; ರಾಜ್ಯ ಸರ್ಕಾರ ಬಡವರಿಗೆ ಉಪಯೋಗವಾಗಲೆಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಇಪ್ಪತ್ನಾಲ್ಕು ಗಂಟೆ ಹೆರಿಗೆ ವ್ಯವಸ್ಥೆ ಕಲ್ಪಿಸಿದೆ. ಆದ್ರೆ ಆರೋಗ್ಯ ಸಚಿವರರಾದ ಶ್ರೀರಾಮುಲು ಕ್ಷೇತ್ರದಲ್ಲೇ ವೈದ್ಯರು ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಆಸ್ಪತ್ರೆಗೆ ಆಗಮಿಸಿದ್ದ ಗರ್ಭಿಣಿಗೆ ಮಗುವಿನ ತಲೆಯಭಾಗ ಗರ್ಭಕೋಶದಿಂದ ಹೊರಬಂದಿದ್ದರೂ, ವೈದ್ಯರ ನಿರ್ಲಕ್ಷ್ಯದಿಂದಾಗಿ ತಾಯಿ ಮಗು ಇಬ್ಬರೂ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
ಆದ್ರೆ ನಿನ್ನೆ ತಾಲೂಕಿನ ಮುಸ್ಟಲಗುಮ್ಮಿ ಗ್ರಾಮದ ಮಹಿಳೆ ಕವಿತಾ ಎಂಬ ಗರ್ಭಿಣಿ ಮಹಿಳೆ ಹೆರಿಗೆಗಾಗಿ ದಾಖಲಾಗಿದ್ರು. ಈ ವೇಳೆ ನೋವಿನಲ್ಲಿ ನರಳುತಿದ್ದ ಕವಿತಾರವರಿಗೆ ವೈದ್ಯೆ ಪದ್ಮರವರು ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಕವಿತಾಗಳಿಗೆ ಮೂರನೆ ಹೆರಿಗೆ ಆಗಿದ್ದರಿಂದ ವೈದ್ಯರು ಹೆರಿಗೆ ಮಾಡಿಸಿಲು ಮುಂದಾದಾಗ ಮಗು ಗರ್ಭಕೋಶದಿಂದ ಅರ್ಧಂಬರ್ಧ ಹೊರಬಂದ ನಂತರ ವೈದ್ಯರು ಕೈಚೆಲ್ಲಿದ್ದು, ಬಳಿಕ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ, ಆದರೆ ಆ್ಯಂಬುಲೆನ್ಸ್ ನಲ್ಲಿ ಮಾರ್ಗ ಮಧ್ಯದಲ್ಲೇ ತಾಯಿ ಮಗು ಮೃತಪಟ್ಟಿದ್ದಾರೆ. ಈ ಘಟನೆ ಕಣ್ಣಾರೆ ಕಂಡ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಇನ್ನೂ ಮೊಳಕಾಲ್ಮೂರು 100 ಹಾಸಿಗೆ ಆಸ್ಪತ್ರೆಯಲ್ಲಿ ಅರೆವಳಿಕೆ ತಜ್ಞರಿಲ್ಲದ ಕಾರಣ ಇಂತಹ ದುರ್ಘಟನೆ ನಡೆದಿದೆ, ತೀವ್ರ ಹಿಂದುಳಿದ ತಾಲೂಕು ಆಗಿದ್ದರಿಂದ ಸರ್ಕಾರಿ ಕೆಲಸಕ್ಕೆ ಅಧಿಕಾರಿಗಳು ಆಗಮಿಸಲು ಹಿಂದೇಟು ಹಾಕುತ್ತಿದ್ದಾರಂತೆ. ಆದ್ದರಿಂದ ತೊಂದರೆ ಆಗುತ್ತಿದ್ದು, ಆರೋಗ್ಯ ಸಚಿವರಾದ ಶ್ರೀ ರಾಮುಲು ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.