ಚಿತ್ರದುರ್ಗ: ರಸ್ತೆ ಅಗಲೀಕರಣದ ನೆಪದಲ್ಲಿ ಜಿಲ್ಲಾಡಳಿತವು ಸರಿ ಸುಮಾರು, ಸಾವಿರಾರು ಹುಣಸೆ ಮರಗಳನ್ನು ನಾಶಪಡಿಸಲು ನಿರ್ಧರಿಸಿದ್ದು, ಇದು ಪರಿಸರ ಸ್ನೇಹಿಗಳ ಕೆಂಗ್ಗಣಿಗೆ ಗುರಿಯಾಗಿದೆ.
ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸೌಂದರ್ಯ ಹೆಚ್ಚಿಸುವ ಹುಣಸೆ ಮರಗಳಿಗೆ, ಜಿಲ್ಲಾಡಳಿತ ಕೊಡಲಿ ಪೆಟ್ಟು ನೀಡಲು ಮುಂದಾಗಿದೆ. ರಸ್ತೆ ಅಗಲೀಕರಣದ ನೆಪದಲ್ಲಿ ಚಳ್ಳಕೆರೆ ಮಾರ್ಗದಲ್ಲಿರುವ ಸುಮಾರು 4,500 ಹುಣಸೆ ಮರಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಚಿತ್ರದುರ್ಗ ಹೊರವಲಯದ ಮದಕರಿಪುರದಿಂದ ಹಿಡಿದು ಚಳ್ಳಕೆರೆ ಪಟ್ಟಣ ಸಿಗುವ ರಸ್ತೆಯ ಇಕ್ಕೆಲಗಳಲ್ಲಿ ಕಾಣಸಿಗುವ ಸುಮಾರು 30 ವರ್ಷದ ಹಳೆಯದಾದ ಹುಣಸೆ ಮರಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಕಾರ್ಬನ್ ಡೈಯಾಕ್ಸೈಡ್ ನೀಡುವ ಏಕೈಕ ಮರ ಇದಾಗಿದ್ದಾರಿಂದ ಈ ಮರಗಳಿಂದ ಜನಸಾಮಾನ್ಯರಿಗೆ ಸಾಕಷ್ಟು ಉಪಯೋಗ ಆಗುತ್ತಿರುವುದರಿಂದ ಹಾಗೂ ಇವು ಚಿತ್ರದುರ್ಗ ನಗರದ ಸೌಂದರ್ಯವನ್ನು ಹೆಚ್ಚಿಸುತ್ತಿವೆ. ಇದರಿಂದಾಗಿ ಮರಗಳನ್ನು ತೆರವುಗೊಳಿಸದಂತೆ ಪರ್ಯಾಯ ಮಾರ್ಗ ಬಳಸಿ, ಮರಗಳನ್ನು ರಕ್ಷಿಸುವಂತೆ ಪರಿಸರ ಪ್ರೇಮಿಗಳು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿದ್ದಾರೆ.
ಈ ಮರಗಳನ್ನು ಹಲವು ವರ್ಷಗಳ ಹಿಂದೆ ಚಿತ್ರದುರ್ಗದ ಜನರು ಪೂಜಿಸುತ್ತಿದ್ದರು. ಇನ್ನು ಕೆಲ ಮಂದಿ ಕಾರ್ಬನ್ ಡೈಯಾಕ್ಸೈಡ್ ಲಭ್ಯವಾಗುತ್ತದೆ ಎಂದು ಅರಿತು ಮರಗಳನ್ನು ಬೆಳೆಸುತ್ತಿದ್ದರು. ಇತಂಹ ಉಪಯುಕ್ತವಾಗಿರುವ ಮರಗಳನ್ನು ಜಿಲ್ಲಾಡಳಿತ ನಾಶಮಾಡಲು ಹೊರಟಿರುವುದು ವಿಪರ್ಯಾಸವಾಗಿದೆ.
ಮರಗಳನ್ನು ಪರ್ಯಾಯ ಮಾರ್ಗವಾಗಿ ಬೇರೆಡೆಗೆ ವರ್ಗಾಯಿಸುವ ತಂತ್ರಜ್ಞಾನ ಬಳಸಿ ಮರಗಳನ್ನು ರಕ್ಷಿಸಬೇಕು. ಒಂದು ವೇಳೆ ಹುಣಸೆ ಮರಗಳನ್ನು ನಾಶಪಡಿಸಿದರೆ, ಮತ್ತೆ ಬೇರೆ ಮರಗಳನ್ನು ಅದೇ ಸ್ಥಳದಲ್ಲಿ ಬೆಳಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಸ್ವಾಗತ ಕೋರುತ್ತಿದ್ದ ಹುಣಸೆ ಮರಗಳನ್ನು, ರಸ್ತೆ ಅಗಲೀಕರಣಕ್ಕೆ ಕಂಠಕವಾಗಿದ್ದರಿಂದ ಜಿಲ್ಲಾಡಳಿತ ನಾಶಪಡಿಸಲು ಮುಂದಾಗಿದೆ. ಮರಗಳನ್ನು ನಾಶಪಡಿಸಿದೆ ಪರ್ಯಾಯ ಮಾರ್ಗ ಕಲ್ಪಿಸಬೇಕೆಂಬುದು ಎಲ್ಲರ ಆಶಯ ಕೂಡ ಆಗಿದೆ.