ETV Bharat / state

ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರ ಬಿಡಿ: ಹೆಚ್​ಡಿಕೆಗೆ ಸಿದ್ದರಾಮಯ್ಯ ಟಾಂಗ್​ - former minister Vinay Kulkarni CBI custody

ಕುಲಕರ್ಣಿಯವರನ್ನು ಕಾನೂನಾತ್ಮಕವಾಗಿ ವಶಕ್ಕೆ ಪಡೆಯಲಾಗಿದೆ ಇದನ್ನೇ ಕಾಂಗ್ರೆಸ್​ನವರು ರಾಜಕೀಯ ಮಾಡ್ತಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ರವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಳೀನ್ ಕುಮಾರ್ ಕಟೀಲ್​ಗೆ ಇನ್ನು ಮೆಚ್ಯೂರಿಟಿ ಇಲ್ಲ ಆದ್ದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ ಎಂದರು.

Siddaramaiah
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
author img

By

Published : Nov 5, 2020, 4:02 PM IST

ಚಿತ್ರದುರ್ಗ: ಮಾಜಿ ಸಚಿವ ವಿನಯ್ ಕುಲಕರ್ಣಿಯವರು ಸಿಬಿಐ ವಶಕ್ಕೆ ಪಡೆದಿರುವುದು ರಾಜಕೀಯ ಪ್ರೇರಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಚಿತ್ರದುರ್ಗದಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ ವೇಳೆ, ಕುಲಕರ್ಣಿಯವರನ್ನು ಕಾನೂನಾತ್ಮಕವಾಗಿ ವಶಕ್ಕೆ ಪಡೆಯಲಾಗಿದೆ ಇದನ್ನೇ ಕಾಂಗ್ರೆಸ್​ನವರು ರಾಜಕೀಯ ಮಾಡ್ತಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಳೀನ್ ಕುಮಾರ್ ಕಟೀಲ್​ಗೆ ಇನ್ನು ಮೆಚ್ಯೂರಿಟಿ ಇಲ್ಲ ಆದ್ದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಉಪ ಚುನಾವಣೆ ಬಳಿಕ ವಿರೋಧ ಪಕ್ಷದ ನಾಯಕತ್ವನ್ನು ಬದಲಾವಣೆ ಮಾಡಲಾಗುತ್ತೆ ಎಂಬ ಸಿಎಂ ಬಿಎಸ್​ವೈ ಹೇಳಿಕೆಗೆ ಪ್ರತಿಕ್ರಿಯಿಸಿ, ಚುನಾವಣೆ ಬಳಿಕ ನೋಡೋಣ ಯಾರ ನಾಯಕತ್ವ ಬದಲಾವಣೆ ಆಗುತ್ತೆ ಎಂದರು.

ಇನ್ನೂ ಉಪ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಹಣ ತಂದು ಸುರಿದಿವೆ ಅದ್ರೇ ನಾವು ಪ್ರಮಾಣಿಕವಾಗಿ ಚುನಾವಣೆ ನಡೆಸಿದ್ದೇವೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರ ಬಿಡಿ ಎಂದು ನಗೆ ಚಟಾಕಿ ಹಾರಿಸಿದರು. ಇ

ವಿಜಯೇಂದ್ರ ಬಗ್ಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ ಈಗ ತಾನೇ ರಾಜಕೀಯದಲ್ಲಿ ವಿಜಯೇಂದ್ರ ಕಣ್ಬಿಡ್ತಾ ಇದ್ದಾರೆ, ಅವರ ಬಗ್ಗೆ ಮಾತನಾಡಿದ್ರೆ ನಮಗೆ ಬೆಲೆ ಇರಲ್ಲ, ರಾಜ್ಯದಲ್ಲಿ ಇಬ್ಬರು ಸಿಎಂಗಳಿದ್ದಾರೆ ಇಬ್ಬರು ಬಿ.ಎಸ್ ಯಡಿಯೂರಪ್ಪನವರು, ಮತ್ತೊಬ್ಬ ಅವರ ಮಗ ವಿಜಯೇಂದ್ರ ಕೂಡ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.