ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧನದಲ್ಲಿರುವ ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನವನ್ನು ನವೆಂಬರ್ 3ರವರೆಗೆ ಮತ್ತೆ 14 ದಿನಗಳ ಅವಧಿಗೆ ವಿಸ್ತರಿಸಿ ಚತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ.
ಮುರುಘಾ ಶರಣರ ಜೊತೆ ಮತ್ತೋರ್ವ ಆರೋಪಿ (ಎ2) ವಾರ್ಡನ್ಗೂ ನ್ಯಾಯಾಂಗ ಬಂಧನವನ್ನೂ ಕೋರ್ಟ್ ವಿಸ್ತರಿಸಿದೆ. ವಿಚಾರಣೆ ವೇಳೆ ಶಿವಮೂರ್ತಿ ಶರಣರು ಇಂದು ಮಾಸ್ಕ್ ಇಲ್ಲದೆ ಹಾಜರಾಗಿದ್ದರು.
ಸ್ವಾಮೀಜಿ ವಿರುದ್ಧದ ಎರಡನೇ ಎಫ್ಐಆರ್ ಪ್ರಕರಣ ಸಂಬಂಧ 2-3 ದಿನಗಳಲ್ಲಿ ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹೇಳಿದರು. ಮಕ್ಕಳ ಹೇಳಿಕೆ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಮೈಸೂರಿನ ಒಡನಾಡಿ ಸಂಸ್ಥೆಯು ಈ ಮೊದಲು ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿತ್ತು.
ಚಿತ್ರದುರ್ಗದ ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರನ್ನಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅವರನ್ನು ನೇಮಿಸಲಾಗಿದೆ.
ಇದನ್ನೂ ಓದಿ: ಎಸ್‌ಜೆಎಂ ವಿದ್ಯಾಪೀಠದ ಅಧಿಕಾರ ಹಸ್ತಾಂತರಿಸಿದ ಮುರುಘಾ ಶರಣರು