ಚಿತ್ರದುರ್ಗ: ಲೋಕಸಭಾ ಚುನಾವಣೆಯ ಬೃಹತ್ ಪ್ರಚಾರಕ್ಕೆ ಇಂದು ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಾಕ್ಷಿಯಾಗಿದೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಶ್ರೀ ರಾಮುಲು ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ಪ್ರಚಾರದಲ್ಲಿ ಭಾಗಿಯಾಗಿ ಶಕ್ತಿ ಪ್ರದರ್ಶಿಸಿದರು.
ಬಿಜೆಪಿ ಅಭ್ಯರ್ಥಿ ಎ. ನಾರಾಯಣಸ್ವಾಮಿ ಪರ ಪ್ರಚಾರದ ವೇಳೆ, ವೇದಿಕೆಯಲ್ಲಿ ಭಾಷಣ ಮಾಡಿದ ಶ್ರೀ ರಾಮುಲು ಗೆದ್ದ ಕ್ಷೇತ್ರವನ್ನ ಮಧ್ಯದಲ್ಲಿ ಬಿಟ್ಟು ಹೋಗುವ ವ್ಯಕ್ತಿ ನಾನಲ್ಲ. ಎಲ್ಲಾ ರಾಜಕಾರಣಿಗಳ ತರ ರಾಮುಲು ಅಲ್ಲ. ಇದ್ದಿದ್ದನ್ನು ಇದ್ದಂಗೆ ಮಾತನಾಡುವೆ. ಅನೇಕರು ನನ್ನ ಬಗ್ಗೆ ಏನೆನೋ ಮಾತನಾಡುತ್ತಾರೆ. ಅವರಿಗೆ ಸಮಾಧಾನ ಮಾಡೋ ಅವಶ್ಯಕತೆ ನನಗಿಲ್ಲ. ಅವರೆಲ್ಲಾ ಅಧಿಕಾರ ಕಳ್ಕೊಂಡು ಮನಸಿಗೆ ಬಂದಂತೆ ಮಾತನಾಡುತ್ತಾರೆ. ಅವರು ನನ್ನನ್ನು ಕೆಣಕಿದಿರುವುದೇ ಉತ್ತಮ ಎಂದು ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಶ್ರೀರಾಮುಲು ಫೋಟೋ ಇಟ್ಕೊಂಡ್ ಶಾಸಕರಾದವ್ರು ನನಗೆ ಬುದ್ದಿ ಕಲಿಸ್ತಾರಾ?. ಶ್ರೀರಾಮುಲು ಎದುರು ಗೆಲ್ಲಲು ಶಕ್ತಿ ಇಲ್ಲದಂತವರು ನನ್ನ ಬಗ್ಗೆ ಮಾತನಾಡ್ತಾರೆ. ಜೀವನದ ಕೊನೆ ಉಸಿರು ಇರೋವರೆಗೂ ನಿನ್ನ ಶಕ್ತಿ ಏನು ಎಂಬುದನ್ನ ನೋಡ್ತೇನಿ ಎಂದು ಶ್ರೀರಾಮುಲು ತೊಡೆ ತಟ್ಟಿದರು.