ಚಿತ್ರದುರ್ಗ: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾತೆ ಮಹಾದೇವಿ ಅನಾರೋಗ್ಯದಿಂದ ಭಕ್ತ ಸಮೂಹವನ್ನು ಬಿಟ್ಟು ಲಿಂಗೈಕ್ಯರಾಗಿದ್ದಾರೆ.
ಕರ್ನಾಟಕದಂತ್ಯ ಅಪಾರ ಭಕ್ತ ಸಮೂಹವನ್ನು ಸಂಪಾದಿಸಿರುವ ಅವರ ಪಾರ್ಥಿವ ಶರೀರ ಕೋಟೆನಾಡು ಚಿತ್ರದುರ್ಗಕ್ಕೆ ಭಕ್ತರ ದರ್ಶನಕ್ಕಾಗಿ ಬೆಂಗಳೂರಿನಿಂದ ತರಲಾಯಿತು. ನಗರದ ಹಳೇ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಭಕ್ತರ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ಜಿಲ್ಲೆಯಾದಂತ್ಯ ಭಕ್ತರು ಚಿತ್ರದುರ್ಗಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು. ಈಗಾಗಲೇ ಚಿತ್ರದುರ್ಗಕ್ಕೆ ಆಗಮಿಸಿರುವ ಪಾರ್ಥಿವ ಶರೀರದ ಮೆರವಣಿಗೆ ನೆರೆಯ ಜಿಲ್ಲೆ ದಾವಣಗೆರೆ ತಲುಪಿ ನಂತರ ಹಾವೇರಿ ತಲುಪಲಿದೆ.