ETV Bharat / state

ಮಾಸ್ಕ್ ಮಾತ್ರವಲ್ಲ, ಸಾಮಾಜಿಕ ಅಂತರ ಕಾಪಾಡದಿದ್ದರೂ ದಂಡ - corona news in chitradurga \

ಜನರು ಸರ್ಕಾರ ಸೂಚಿಸಿದ ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಓಡಾಡುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಆರಂಭದಲ್ಲಿ ಮಾಸ್ಕ್​ ಹಾಕದವರಿಗೆ ಮಾತ್ರ ದಂಡ ವಿಧಿಸುತ್ತಿದ್ದರು. ಆದರೀಗ ಸಾಮಾಜಿಕ ಅಂತರ‌ ಕಾಪಾಡದೆ ಗುಂಪು ಗುಂಪಾಗಿ ಸೇರುವ ಜನರಿಗೂ ದಂಡ ವಿಧಿಸಲು ಮುಂದಾಗಿದ್ದಾರೆ.

social-distance
ಮಾಸ್ಕ್ ಮಾತ್ರವಲ್ಲ ಸಾಮಾಜಿಕ ಅಂತರ ಕಾಪಾಡದಿದ್ದರೂ ದಂಡ ಖಚಿತ
author img

By

Published : Jul 11, 2020, 10:24 AM IST

ಚಿತ್ರದುರ್ಗ : ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮಾಸ್ಕ್​ ಹಾಕದವರ ಜೊತೆಗೆ ಸಾಮಾಜಿಕ ಅಂತರ ಕಾಪಾಡದವರಿಗೂ ನಗರಸಭೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.

ಅಂಗಡಿ, ಪ್ರಮುಖ ವೃತ್ತಗಳು, ಹೋಟೆಲ್, ಸಾರ್ವಜನಿಕ ಸ್ಥಳ, ಸೂಪರ್ ಮಾರ್ಕೆಟ್ ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡದೆ ಜನಸಾಮಾನ್ಯರು ವ್ಯವಹರಿಸುತ್ತಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಾಸ್ಕ್ ಹಾಕದವರಿಗೆ 100 ರೂ. ದಂಡ ಹಾಗೂ ಸಾಮಾಜಿಕ ಅಂತರ ಕಾಪಾಡದೆ ಇರುವವರಿಗೆ 200 ರೂಪಾಯಿ ದಂಡ ವಿಧಿಸಲು ಮುಂದಾಗಿದ್ದಾರೆ.

ಸಾಮಾಜಿಕ ಅಂತರ ಕಾಪಾಡದಿದ್ದರೂ ದಂಡ ಖಚಿತ

ಜಿಲ್ಲೆಯಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ. ಇದನ್ನು ಮನಗಂಡ ನಗರಸಭೆಯ ಅಧಿಕಾರಿಗಳು ಸಾಮಾಜಿಕ ಅಂತರ ಕಾಪಾಡದೆ ಇರುವವರ ವಿರುದ್ಧ ದಂಡ ಪ್ರಯೋಗ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.