ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ವಿಕಲಚೇತನರು ನಗರದಲ್ಲಿ ಕಾದು ಕಾದು ಸುಸ್ತಾಗಿ ಕೊನೆಗೆ ಕೆಲವರು ಮನೆಯತ್ತ ಮುಖ ಮಾಡಿರುವ ಘಟನೆ ನಡೆದಿದೆ.
ಸರ್ಕಾರದಿಂದ ವಿಕಲಚೇತನರಿಗೆ ತ್ರೀ ವ್ಹೀಲರ್ ಬೈಸಿಕಲ್, ವೀಲ್ ಚೇರ್ ಇತರೆ ಪರಿಕರಗಳ ವಿತರಣ ಕಾರ್ಯಕ್ರಮಕ್ಕೆ ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಬೇಕಿದ್ದ ರಾಮುಲು ಸಂಜೆ 04 ಗಂಟೆ ಕಳೆದ್ರೂ ಬರಲೇ ಇಲ್ಲ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಮಿಸಿದ್ದ ವಿಕಲಚೇತನರು ನಗರದ ತರಾಸು ರಂಗ ಮಂದಿರದಲ್ಲಿ ಕಾದು ಕುಳಿತು, ಸಚಿವರಿಗೆ ಹಿಡಿಶಾಪ ಹಾಕುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು 4 ಗಂಟೆಗೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಆರೋಗ್ಯ ಸಚಿವ ಶ್ರೀ ರಾಮುಲು, ಪ್ರತಿಯೊಬ್ಬ ವಿಕಲಚೇತನರಿಗೆ ಬೈಸಿಕಲ್ ಹಾಗೂ ಕೆಲ ಪರಿಕರಗಳನ್ನು ನೀಡುವ ಮೂಲಕ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಯಾಚಿಸಿದರು.