ಚಿತ್ರದುರ್ಗ: ಜಿಲ್ಲಾ ಪ್ರವಾಸ ಕೈಗೊಂಡಿರುವ ಕೃಷಿ ಸಚಿವ ಬಿ. ಸಿ. ಪಾಟೀಲ್ 'ಕ್ರಾಪ್ ಸರ್ವೆ' ಎಂಬ ರೈತ ಸ್ನೇಹಿ ಆ್ಯಪ್ನ್ನು ಬಿಡುಗಡೆ ಮಾಡಿದರು.
ಜಿಲ್ಲೆಯ ಹಿರಿಯೂರು ತಾಲೂಕಿನ ಕಸ್ತೂರಿ ರಂಗಪ್ಪನಾಯಕ ಹಳ್ಳಿಯ ರೈತನೋರ್ವನ ಜಮೀನಿಗೆ ಭೇಟಿ ನೀಡಿ, ರೈತ ಸ್ನೇಹಿ ಕ್ರಾಪ್ ಸರ್ವೆ ಆ್ಯಪ್, ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಚಿವರು ಕೆಲ ಕಾಲ ಕೆಮ್ಮಿದ್ದರಿಂದ ಅಕ್ಕ ಪಕ್ಕದಲ್ಲಿದ್ದ ರೈತ ಮುಖಂಡರು ಆತಂಕ್ಕೊಳಗಾದರು.