ಚಿತ್ರದುರ್ಗ : ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಸೋಂಕು ತಡೆಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಚಾಲನೆ ನೀಡಿದರು.
![corona awareness in chitradurga district](https://etvbharatimages.akamaized.net/etvbharat/prod-images/6646832_705_6646832_1585914658148.png)
ಇಲ್ಲಿನ ಜಿಲ್ಲಾಧಿಕಾರಿ ಗೃಹ ಕಚೇರಿ ಆವರಣದಲ್ಲಿ ರೆಡ್ ಕ್ರಾಸ್ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮಕ್ಕೆ ಡಿಸಿ ಹಸಿರು ನಿಶಾನೆ ತೋರಿಸಿದರು. ಈಗಾಗಲೇ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಮನೆಯಿಂದ ಹೊರ ಬರದಂತೆ ಸೂಚಿಸಿದೆ.
ಇದರೊಟ್ಟಿಗೆ ರೆಡ್ ಕ್ರಾಸ್ ಸ್ವಯಂ ಸೇವಕರು ಸಾರ್ವಜನಿಕರಿಗೆ ಮಾಸ್ಕ್, ಸೋಪ್ ವಿತರಿಸುವ ಮೂಲಕ ಕೊರೊನಾ ಸೋಂಕಿನ ಬಗೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ವಿಶ್ವದಿಂದಲೇ ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಲು ಸಜ್ಜಾಗುವಂತೆ ಘೋಷಣೆ ಕೂಗಿದರು.