ಚಿತ್ರದುರ್ಗ: ಮಹಾಮಾರಿ ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಡಿಸ್ ಇನ್ಫೆಕ್ಷನ್ ಟನಲ್ (ವೈರಾಣು ನಾಶಕ ಸುರಂಗ) ಉದ್ಘಾಟನೆ ಮಾಡಿದೆ.
ಜಿಲ್ಲೆಯ ಎರಡು ಕಡೆ ಡಿಸ್ಇನ್ಫೆಕ್ಷನ್ ಟನಲ್ ಮಾರ್ಗ ಉದ್ಘಾಟನೆ ಮಾಡಲಾಗಿದ್ದು, ನಗರದ ಹಳೇ ಮಾದ್ಯಮಿಕ ಆವರಣ, ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಜನರ ಹಿತದೃಷ್ಟಿಯಿಂದ ಸ್ಥಾಪನೆ ಮಾಡಲಾಗಿದೆ.
ಮಾರುಕಟ್ಟೆಗೆ ಆಗಮಿಸುವ ಜನರು ಆದಷ್ಟು ಡಿಸ್ಇನ್ಫೆಕ್ಷನ್ ಟನಲ್ ಮಾರ್ಗದ ಮೂಲಕವೇ ಹೋಗಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.