ಚಿತ್ರದುರ್ಗ: ಕೊರೊನಾ ಲಾಕ್ಡೌನ್ನಿಂದಾಗಿ ಬೆಳೆದ ಫಸಲಿಗೆ ಸರಿಯಾದ ಬೆಲೆ ಸಿಗದೆ ಜಿಲ್ಲೆಯ ರೈತನೋರ್ವ ತಾನು ಬೆಳೆದಿದ್ದ ಬೆಳೆಯನ್ನು ನಾಶ ಮಾಡಿದ್ದಾನೆ.
ತಾಲೂಕಿನ ಸೀಗೆಹಳ್ಳಿಯ ರೈತ ಜಗದೀಶ್ ಕರಿಸಿದ್ದಪ್ಪ ಎಂಬುವವರು ಎರಡು ಎಕರೆ ಜಮೀನಿನನ್ನು ಗುತ್ತಿಗೆ ಪಡೆದು ಸಾಲ ಮಾಡಿ ಬದನೆಕಾಯಿ ಬೆಳೆ ಬೆಳೆದಿದ್ದರು. ಆದರೆ, ಕೊರೊನಾ ಪ್ರೇರೇಪಿತ ಲಾಕ್ಡೌನ್ ಆದ ಪರಿಣಾಮ ಬೆಲೆ ಕುಸಿತ ಉಂಟಾಗಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಇದರಿಂದ ಬೇಸತ್ತ ರೈತ, ತಾನು ಬೆಳೆದ ಬೆಳೆಯನ್ನು ನಾಶ ಮಾಡಿದ್ದಾನೆ.
ಕಳೆದ ಹಲವು ತಿಂಗಳಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದು, ಸಂಕಷ್ಟಕ್ಕೀಡಾಗಿರುವ ರೈತರ ಸಹಾಯಕ್ಕೆ ಸರ್ಕಾರ ಧಾವಿಸಬೇಕೆಂದು ರೈತ ಮನವಿ ಮಾಡಿಕೊಂಡಿದ್ದಾರೆ.