ETV Bharat / state

ಕವಾಡಿಗರಹಟ್ಟಿ ಪ್ರಕರಣ: ಸಿಟಿ ರೌಂಡ್ಸ್ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ - ಕವಾಡಿಗರಹಟ್ಟಿ ಪ್ರಕರಣ

ಕವಾಡಿಗರಹಟ್ಟಿ ಬಡಾವಣೆಯಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯತನದ ಬಗ್ಗೆ ಕಿಡಿ ಕಾರಿದರು.

Chitradurga city rounds from Lokayukta justice bs patil's
ಸಿಟಿ ರೌಂಡ್ಸ್ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್
author img

By

Published : Aug 11, 2023, 2:31 PM IST

Updated : Aug 11, 2023, 3:46 PM IST

ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್

ಚಿತ್ರದುರ್ಗ: ನಗರದ ಸ್ವಚ್ಛತೆಗೆ 10ಕ್ಕೆ 2 ರಿಂದ 3 ಅಂಕ ಮಾತ್ರ ನೀಡಬಹುದು. ಸ್ವಚ್ಛತೆ ಇಲ್ಲದಿದ್ದರೆ ಇಂತಹ ಹತ್ತಾರು ರೋಗಗಳು ಬರಬಹುದು ಎಂದು ಕವಾಡಿಗರಹಟ್ಟಿಯಲ್ಲಿ ಸಂಭವಿಸಿದ ದುರಂತದ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗ ನಗರದ ಸಿಟಿ ರೌಂಡ್ಸ್ ಹಾಗೂ ಕವಾಡಿಗರಹಟ್ಟಿ ಭೇಟಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಖಾಲಿ ನಿವೇಶನಗಳಲ್ಲಿ ಕಸದ ರಾಶಿಯೇ ಬಿದ್ದಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯತನದ ಬಗ್ಗೆ ದೂರು ದಾಖಲಿಸಿಕೊಳ್ಳುತ್ತೇವೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Chitradurga city rounds from Lokayukta justice bs patil's
ಸಿಟಿ ರೌಂಡ್ಸ್ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್

ವೇಸ್ಟ್ ಡಿಸ್ಪೋಸಲ್ ಮಾದರಿಗೆ ಪ್ರಯತ್ನ ಆಗಬೇಕು. ಆಡಳಿತ ವ್ಯವಸ್ಥೆ ಮಾತ್ರವಲ್ಲ, ಇದರರಲ್ಲಿ ಜನರ ಪಾಲುದಾರಿಕೆ ಸಹ ಮುಖ್ಯ. ನಗರದ ಬಹುತೇಕ ಅಂಗಡಿಗಳ ಮುಂದೆ ಪ್ಲಾಸ್ಟಿಕ್, ಕಸ ಬಿದ್ದಿದೆ. ಬೆಳಗ್ಗೆ 7:30ಗಂಟೆಯಾದರೂ ಕಸ ಗುಡಿಸುವವರು ಇಲ್ಲ. ಸಾರ್ವಜನಿಕರು, ಅಂಗಡಿ ಮಾಲೀಕರು ಎಚ್ಚೆತ್ತುಕೊಳ್ಳಬೇಕು. ಕೆಲವೆಡೆ ಗೂಡಿಸಿ ಒಂದೆಡೆ ಗುಡ್ಡೆ ಹಾಕಿದ್ದು ಕಂಡು ಬಂದಿದೆ. ಈ ರೀತಿಯಾದರೆ ಆಸ್ಪತ್ರೆ, ವೈದ್ಯರು ಎಷ್ಟಾದರೂ ಸಾಲದು. ಮೊದಲು ಪರಿಸರ, ಕುಡಿಯುವ ನೀರು ಸರಿ ಇರಬೇಕು. ಪರಿಸರ, ನೀರು ಶುದ್ಧವಿದ್ದರೆ ರೋಗ ನಿರೋಧಕ ಶಕ್ತಿ ಸಾಧ್ಯ. ಶಾಲೆ, ಸಂಸ್ಥೆಗಳ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಕವಾಡಿಗರಹಟ್ಟಿಯ ಸಮಸ್ಯೆ ಮತ್ತೊಂದು ಕಡೆ ಆಗಬಹುದು, ಇಡೀ ಊರಿಗೇ ಸಮಸ್ಯೆ ಆಗಬಹುದು. ಮುಂಜಾಗೃತೆ ವಹಿಸಿದ್ದರೆ ದುರಂತ ತಡೆಯಬಹುದಿತ್ತು. ಖಾಲಿ ನಿವೇಶನ ಮಾಲೀಕರು ತಮ್ಮ ನಿವೇಶನಗಳನ್ನು ಸ್ವಚ್ಛವಿಡಬೇಕು. ಇಲ್ಲವಾದಲ್ಲಿ ನಗರಸಭೆಯವರು ಸ್ವಚ್ಛಗೊಳಿಸಿ ಅದರ ವೆಚ್ಚ ಪಡೆಯಲಿ ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ಕೆಲವು ಸಲಹೆಗಳನ್ನು ನೀಡಿದರು.

ಸ್ವಚ್ಛತೆ ಕಾಪಾಡದೇ ಇರುವುದು ಗಂಭೀರ ಅಪರಾಧ. ನಗರಸಭೆ ಪೌರಾಯುಕ್ತ ಸೇರಿ ಈ ಬಗ್ಗೆ ಹಲವು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಆದ್ಯತೆ ಮೇರೆಗೆ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು. ಸ್ವಚ್ಛತೆ ಇಲ್ಲದ ಕಾರಣ ವಿಚಿತ್ರ ಖಾಯಿಲೆ ಉಲ್ಬಣಿಸುತ್ತಿವೆ. ಚಿತ್ರದುರ್ಗ ನಗರ ರಾಜ್ಯದಲ್ಲೇ ಮೊದಲ ಕ್ಲೀನ್ ಸಿಟಿ ಆಗಬೇಕು ಎಂದರು.

ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ 5 ಸಾವು ಸಂಭವಿಸಿದ್ದು ದುರಂತ. ಕವಾಡಿಗರಹಟ್ಟಿಯಲ್ಲಿ ಪೈಪ್ ಲೈನ್ ಅವ್ಯವಸ್ಥೆ ಇದೆ. ಪ್ರಕರಣಕ್ಕೆ ಕಾರಣವೇನೆಂಬುದು ತನಿಖೆಯಿಂದ ಬಯಲಾಗಬೇಕು. ಬಯಲು ಶೌಚಾಲಯದಿಂದಲೂ ಕಾಲರಾ ಹರಡುವ ಸಾಧ್ಯತೆಯಿದೆ. ತಜ್ಞರು ಈ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಿಂದ ಪಾಠ ಕಲಿಯಬೇಕು, ಮುಂಜಾಗ್ರತೆ ವಹಿಸಬೇಕು. ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇವೆ. ಕವಾಡಿಗರಹಟ್ಟಿ ಜನರಲ್ಲಿ ಆತಂಕವಿದೆ, ಧೈರ್ಯ ತುಂಬಬೇಕು. ನೀರಿನಲ್ಲಿ ವಿಷ ಬೆರೆಸಲಾಗಿದೆ ಎಂಬ ಆರೋಪವೂ ಇದೆ. ಎಲ್ಲದರ ಬಗ್ಗೆಯೂ ವೈಜ್ಞಾನಿಕ ಪರೀಕ್ಷೆ ನಡೆಸಬೇಕು. ಮಲ್ಲಾಪುರ, ಮುರುಘಾಮಠ ಬಳಿಯ ಕೆರೆ ನೀರು ಕಲುಷಿತಗೊಂಡಿದೆ. ಈ ಬಗ್ಗೆ ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಲಾಗುವುದು. ಚಿತ್ರದುರ್ಗದಲ್ಲಿ ಸ್ವಚ್ಛತೆ ಕಾಪಾಡದ್ದರ ಬಗ್ಗೆ ಪ್ರಿನ್ಸಿಪಲ್ ಸೆಕ್ರಟರಿ, ಚಿತ್ರದುರ್ಗ ಡಿಸಿ, ನಗರಸಭೆ ಪೌರಾಯುಕ್ತ ಸೇರಿ ಹಲವು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಕವಾಡಿಗರಹಟ್ಟಿ ಪ್ರಕರಣ: ನೀರಿನಲ್ಲಿ ಕಾಲರಾ ಮಾದರಿ ಬ್ಯಾಕ್ಟೀರಿಯಾ ಪತ್ತೆ.. ಬೆಂಗಳೂರು ಲ್ಯಾಬ್​ ಟೆಸ್ಟ್​ ವರದಿ ಬಹಿರಂಗ

Last Updated : Aug 11, 2023, 3:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.