ಚಿತ್ರದುರ್ಗ: ಜಿಲ್ಲೆಯ ಗಡಿಗೆ ಭದ್ರಾ ಜಲಾಶಯದ ನೀರು ತಲುಪಿದ ಹಿನ್ನೆಲೆ ಕುಂಚಿಟಿಗ ಶ್ರೀಗಳು ಬಾಗಿನ ಅರ್ಪಿಸಿದರು.
ಜಿಲ್ಲೆ ಪ್ರವೇಶ ಮಾಡಿದ ಭದ್ರೆಯನ್ನು ಸ್ವಾಗತಿಸಿದ ಜನರು, ಬಾಗಿನ ಅರ್ಪಿಸಿ ಸಂಭ್ರಮಿಸಿದರು. ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷರಾದ ಕಾಯಕಯೋಗಿ ಜಗದ್ಗುರು ಡಾ. ಶ್ರೀ ಶಾಂತವೀರ ಮಹಾಸ್ವಾಮಿಜಿ ಹಾಗೂ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ, ರೈತ ಸಂಘದ ಪ್ರಮುಖರು, ಅಧಿಕಾರಗಳು, ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿ ಬಾಗಿನ ಅರ್ಪಿಸಿದರು.