ಚಿತ್ರದುರ್ಗ: 3ನೇ ತರಗತಿ ವಿದ್ಯಾರ್ಥಿ ವರ್ಣಮಾಲೆಯ ಎಲ್ಲಾ ಅಕ್ಷರಗಳಿಂದ ಒಂದೊಂದು ಗಾದೆಯನ್ನು ಚಕಚಕನೆ ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-
ಅಕ್ಷರಮಾಲೆ ಕಲಿಸುವ ವಿನೂತನ ಪ್ರಯತ್ನ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಈ ಶಾಲೆಯ ಶಿಕ್ಷಕ-ಕಿಯರಿಗೆ ನನ್ನ ಅಭಿನಂದನೆಗಳು. https://t.co/i1hZ5a3YcQ
— S.Suresh Kumar, Minister - Govt of Karnataka (@nimmasuresh) January 9, 2020 " class="align-text-top noRightClick twitterSection" data="
">ಅಕ್ಷರಮಾಲೆ ಕಲಿಸುವ ವಿನೂತನ ಪ್ರಯತ್ನ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಈ ಶಾಲೆಯ ಶಿಕ್ಷಕ-ಕಿಯರಿಗೆ ನನ್ನ ಅಭಿನಂದನೆಗಳು. https://t.co/i1hZ5a3YcQ
— S.Suresh Kumar, Minister - Govt of Karnataka (@nimmasuresh) January 9, 2020ಅಕ್ಷರಮಾಲೆ ಕಲಿಸುವ ವಿನೂತನ ಪ್ರಯತ್ನ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಈ ಶಾಲೆಯ ಶಿಕ್ಷಕ-ಕಿಯರಿಗೆ ನನ್ನ ಅಭಿನಂದನೆಗಳು. https://t.co/i1hZ5a3YcQ
— S.Suresh Kumar, Minister - Govt of Karnataka (@nimmasuresh) January 9, 2020
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಬಾಲಕನ ಜ್ಞಾಪಕ ಶಕ್ತಿ ಮತ್ತು ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಲಂಬಾಣಿಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಿನಯ್‌ಪ್ರಸಾದ್, 'ಅ'ಯಿಂದ 'ಳ'ವರೆಗೂ ವರ್ಣಮಾಲೆ ಮಿಶ್ರಿತ ಒಂದೊಂದು ಗಾದೆ ಮಾತನ್ನ ಚಕಚಕನೆ ಹೇಳಿ ಸಂಚಲನ ಸೃಷ್ಟಿಸಿದ್ದಾನೆ.
ಶಾಲೆ ಚಿಕ್ಕದಾದರೂ ಕಲಿಕೆಯಲ್ಲಿ ಇಲ್ಲಿನ ಮಕ್ಕಳು ತಮ್ಮದೇ ಆದ ಚಾಪು ಮೂಡಿಸುತ್ತಿದ್ದಾರೆ. ಮಕ್ಕಳು ಹೇಳುವ ಒಂದೊಂದು ಅಕ್ಷರಕ್ಕೆ ಥಟ್ ಅಂತಾ ಗಾದೆ ಹೇಳುತ್ತಾನೆ. ಈ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೂ 25 ಮಕ್ಕಳು ಓದುತ್ತಿದ್ದಾರೆ. ಎರಡು ಕಲಿಕಾ ಕೊಠಡಿಗಳಿದ್ದು, ಇಬ್ಬರು ಮಹಿಳಾ ಶಿಕ್ಷಕರಿದ್ದಾರೆ. ಈತನ ಜಾಣ್ಮೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿಕ್ಷಕಿ ಸುಜಾತಮ್ಮ ಅವರ ಶ್ರಮವೂ ಈ ಬಾಲಕನಿಗೆ ಪ್ರೇರಣೆಯಾಗಿದೆ.