ETV Bharat / state

ಗಂಡನ ಒತ್ತಾಯಕ್ಕೆ ನೇಣಿಗೆ ಶರಣಾದ ಹೆಂಡತಿ, ತಾನು ವಿಷ ಕುಡಿದು ಆಸ್ಪತ್ರೆ ಸೇರಿದ ಪತಿರಾಯ.. - chikkamagaluru leatest news

ಅರುಣ್‍ ಮದುವೆ ಮುಂಚೆಯೇ ಸುಮಾರು 10 ವರ್ಷಗಳಿಂದಲೂ ಅಕ್ರಮ ಸಂಬಂಧವಿತ್ತು ಎಂದು ಮೃತ ರಂಜಿತಾ ಪೋಷಕರು ಆರೋಪಿಸಿದ್ದಾರೆ. ಅರುಣ್ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿರೋ ಮಹಿಳೆ, ರಂಜಿತಾಗೆ ನಾನು ಅರುಣ್‍ನನ್ನ ಮದುವೆಯಾಗಿ ಹತ್ತು ವರ್ಷವಾಗಿದೆ. ನೀನು ಏಕೆ ಮದುವೆಯಾದೆ ಎಂದು ಕಿರುಕುಳ ನೀಡುತ್ತಿದ್ದಳಂತೆ.

wife-commits-suicide-for-husbands-illicit-relationship-chikkamagaluru
ಗಂಡನ ಒತ್ತಾಯಕ್ಕೆ ನೇಣಿಗೆ ಶರಣಾದ ಹೆಂಡತಿ, ತಾನು ವಿಷ ಕುಡಿದು ಆಸ್ಪತ್ರೆ ಸೇರಿದ ಪತಿರಾಯ..
author img

By

Published : Nov 3, 2020, 10:50 PM IST

ಚಿಕ್ಕಮಗಳೂರು: ನೇಣಿನ ಕುಣಿಕೆಗೆ ಕೊರಳೊಡ್ಡಿ ಅಣ್ಣನಿಗೆ ಫೋನ್ ಮಾಡಿದ ತಂಗಿ ಪ್ರಾಣ ಉಳಿಸುವಂತೆ ಬೇಡಿದ್ದಾಳೆ. ಇನ್ನೊಂದು ಕಡೆ ಭಾವ ಆತ್ಮಹತ್ಯೆಗೆ ಯತ್ನಿಸಿ ಸಾವು-ಬದುಕಿನ ನಡುವೆ ಹೋರಾಟ. ಅಷ್ಟಕ್ಕೂ ಇಲ್ಲಿ ಹೆಂಡತಿ ಆತ್ಮಹತ್ಯೆ, ಅಲ್ಲಿ ಗಂಡನ ಆತ್ಮಹತ್ಯೆ ಯತ್ನಕ್ಕೆ ಅಸಲಿ ಕಾರಣ ಏನ್ ಗೊತ್ತಾ. ಈ ಕುರಿತ ಒಂದು ವರದಿ ಇಲ್ಲಿದೇ ನೋಡಿ.

ಗಂಡನ ಒತ್ತಾಯಕ್ಕೆ ನೇಣಿಗೆ ಶರಣಾದ ಹೆಂಡತಿ, ತಾನು ವಿಷ ಕುಡಿದು ಆಸ್ಪತ್ರೆ ಸೇರಿದ ಪತಿರಾಯ..

23 ವಯಸ್ಸಿನ ರಂಜಿತಾ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಸಮೀಪದ ಹೊಗರೇಹಳ್ಳಿ ನಿವಾಸಿ. ಮೂರು ವರ್ಷದ ಹಿಂದೆ ಚಿಕ್ಕಮಗಳೂರಿನ ಕೆಇಬಿಯಲ್ಲಿ ಕ್ಯಾಶಿಯರ್ ಆಗಿದ್ದ ಅರುಣ್ ಎಂಬುವನೊಂದಿಗೆ ವಿವಾಹವಾಗಿತ್ತು. ಮದುವೆಯಾದ ಮೂರು ವರ್ಷಕ್ಕೆ ಒಂದೇ ಒಂದು ದಿನ, ರಂಜಿತಾಳನ್ನ ತವರಿಗೆ ಕಳಿಸಿದ್ದನಂತೆ ಅರುಣ್. ಅದೇನಾಯ್ತೋ ಏನೋ, ಅರುಣ್ ನಿನ್ನೆ ಸಂಜೆ 4 ಗಂಟೆಗೆ ಪತ್ನಿಗೆ ಫೋನ್ ಮಾಡಿ ನೀನೂ ಸಾಯಿ, ನಾನು ಸಾಯ್ತಿನಿ ಅಂದನಂತೆ. ಇಲ್ಲಿ ಪತ್ನಿ ಹಾಲು ಕುಡಿಯೋ ಎರಡು ವರ್ಷದ ಮಗು ಬಿಟ್ಟು ನೇಣಿಗೆ ಕೊರಳೊಡ್ಡಿ, ಅಣ್ಣನಿಗೆ ಫೋನ್ ಮಾಡಿದ್ಲು. ಅಣ್ಣ ಬರುವಷ್ಟರಲ್ಲಿ ಆಕೆ ಪ್ರಾಣಪಕ್ಷಿ ಹಾರಿಹೋಗಿತ್ತು.

ಹಳ್ಳಿಗೆ ಹೋಗಿ ಭಾವನ ನೋಡಿದರೆ, ಆತ ಒಂದು ಕೇಸ್ ಬಿಯರ್​​ನಲ್ಲಿ 9 ಬಾಟಲಿ ಖಾಲಿ ಮಾಡಿ, ಸಿಗರೇಟ್ ಸೇದುತ್ತಾ ನಾನು ವಿಷ ಕುಡಿದಿದ್ದೇನೆ ಎಂದ ಮೇಲೆ ಆತನನ್ನ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ, ಸಾವಿನಿಂದ ಪಾರಾಗಿದ್ದಾನೆ. ಆದರೇ, ಮೃತ ರಂಜಿತಾ ಕುಟುಂಬದವರು, ಆತನ ಮಾನಸಿಕ ಕಿರುಕುಳಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

ಅರುಣ್‍ ಮದುವೆ ಮುಂಚೆಯೇ ಸುಮಾರು 10 ವರ್ಷಗಳಿಂದಲೂ ಅಕ್ರಮ ಸಂಬಂಧವಿತ್ತು ಎಂದು ಮೃತ ರಂಜಿತಾ ಪೋಷಕರು ಆರೋಪಿಸಿದ್ದಾರೆ. ಅರುಣ್ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿರೋ ಮಹಿಳೆ, ರಂಜಿತಾಗೆ ನಾನು ಅರುಣ್‍ನನ್ನ ಮದುವೆಯಾಗಿ ಹತ್ತು ವರ್ಷವಾಗಿದೆ. ನೀನು ಏಕೆ ಮದುವೆಯಾದೆ ಎಂದು ಕಿರುಕುಳ ನೀಡುತ್ತಿದ್ದಳಂತೆ. ಅಷ್ಟೆ ಅಲ್ಲದೆ, ಅರುಣ್ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಮಹಿಳೆ ಜೊತೆ ಇದ್ದ ಫೋಟೋ ಹಾಗೂ ವಿಡಿಯೋಗಳಿದ್ದ ಪೆನ್‍ಡ್ರೈವ್ ರಂಜಿತಾಗೆ ಸಿಕ್ಕಿದ್ದು, ಎಲ್ಲವನ್ನೂ ನೋಡಿದ್ದಳಂತೆ. ಎಲ್ಲಾ ವಿಷಯವನ್ನು ಅಪ್ಪನ ಗಮನಕ್ಕೂ ತಂದಿದ್ದಳು. ಮದುವೆಯಾದ ಮೂರು ವರ್ಷಕ್ಕೆ ಕಳೆದ ಭಾನುವಾರ 24 ಗಂಟೆ ಮಾತ್ರ ತವರಿಗೆ ಕಳಿಸಿದ್ದಂತೆ ಅರುಣ್. ಗಂಡ ಹಾಗೂ ಆ ಮಾಯಾಂಗನೆಯಿಂದ ನನ್ನ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಒಟ್ಟಾರೆಯಾಗಿ ಅಪ್ಪ-ಅಮ್ಮ-ಆಕೆ ಮಧ್ಯೆ ತಾಯಿ ಪ್ರೀತಿ ಕಳೆದುಕೊಂಡಿದ್ದು ಮಾತ್ರ ಎರಡು ವರ್ಷದ ಹಸುಗೂಸು. ಪೊಲೀಸರು ನಿಷ್ಪಕ್ಷಪಾತವಾದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕೈಗೊಳ್ಳಬೇಕೆಂಬುದು ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.