ಚಿಕ್ಕಮಗಳೂರು: ಮೊನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಅವಧೂತ ವಿನಯ್ ಗುರೂಜಿ ಅವರ ಗೌರಿಗದ್ದೆಯ ಆಶ್ರಮಕ್ಕೆ ಬಂದು ಪೂಜೆ ಮುಗಿಸಿ ಹೋಗುವಾಗ ವಿನಯ್ ಗುರೂಜಿ, ಬಿಎಸ್ವೈಗೆ ಎಚ್ಚರದಿಂದ ಇರಲು ಹೇಳಿದ್ಯಾಕೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಒಂದು ವೇಳೆ, ಬಿಎಸ್ವೈ ಅವರ ಕುರ್ಚಿಗೂ ಕಂಟಕ ಎದುರಾಗಲಿದ್ಯಾ ಎಂಬ ಮಾತುಗಳು ಹರಿದಾಡುತ್ತಿದ್ದು, ವಿನಯ್ ಗುರೂಜಿ ಅವರ ಮಾತಿನ ಮರ್ಮವೇನು? ಬಿಎಸ್ವೈ ಯಾಗ ಮುಗಿಸಿ ಹೋಗುವ ವೇಳೆ ವಿನಯ್ ಗುರೂಜಿ, ಬಿಎಸ್ವೈ ಅವರನ್ನು ತಬ್ಬಿಕೊಂಡು ಹಣೆಗೆ ಮುತ್ತಿಟ್ಟಿದ್ಯಾಕೆ ಎಂಬ ಪ್ರಶ್ನೆ ಉದ್ಬವವಾಗುತ್ತಿದೆ. ಎಚ್ಚರದಿಂದ ಹೆಜ್ಜೆ ಇಡಿ ಎಂದೂ ಯಾವ ಉದ್ದೇಶದಿಂದ ಹೇಳಿದ್ರು ಎಂಬುದು ಈಗ ಚರ್ಚೆ ಗ್ರಾಸವಾಗಿದೆ.
ಎಚ್ಚರದ ಹೆಜ್ಜೆ ನೆರೆಯ ಅಭಿವೃದ್ದಿಗೋ, ಅನರ್ಹ ಶಾಸಕರ ಸಮಾಧಾನಕ್ಕೋ ಅಥವಾ ಅಧಿಕಾರದ ಸಂಚಾರಕ್ಕೋ ಎಂಬ ಅನುಮಾನಗಳು ಎದ್ದಿವೆ. ಬಿಜೆಪಿ ಪಕ್ಷದಲ್ಲಿ ಆತಂರಿಕವಾಗಿ ಎಲ್ಲವೂ ನಿಗೂಢವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.